ಮಡಿಕೇರಿ, ಆ. 10: ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಇಂದು ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಫಲಿತಾಂಶವನ್ನು ಪ್ರಕಟಿಸಿದ್ದು, ಕಳೆದ ಬಾರಿ 22ನೇ ಸ್ಥಾನಗಳಿಸಿದ್ದ ಕೊಡಗು ಜಿಲ್ಲೆ ಪ್ರಸಕ್ತ ವರ್ಷ 18ನೇ ಸ್ಥಾನ ಪಡೆದುಕೊಂಡಿದೆ.ಇನ್ನುಳಿದಂತೆ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದ್ವಿತೀಯ ಹಾಗೂ ಮಧುಗಿರಿ ಜಿಲ್ಲೆ ತೃತೀಯ ಸ್ಥಾನ ಗಳಿಸಿದೆ. ರಾಜ್ಯಕ್ಕೆ ಕೊನೆಯ ಸ್ಥಾನ ವನ್ನು ಯಾದಗಿರಿ ಜಿಲ್ಲೆ ಪಡೆದು ಕೊಂಡಿದೆ. ರಾಜ್ಯದಲ್ಲಿ ಪರೀಕ್ಷೆ ಬರೆದ 8 ಲಕ್ಷದ 11 ಸಾವಿರದ 50 ವಿದ್ಯಾರ್ಥಿ ಗಳ ಪೈಕಿ 5,82,316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 277 ಮೌಲ್ಯಮಾಪನ (ಮೊದಲ ಪುಟದಿಂದ) ಕೇಂದ್ರಗಳಲ್ಲಿ 52310 ಮಂದಿ ಮೌಲ್ಯ ಮಾಪಕರು ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡಿದರು ಎಂದು ಸುರೇಶ್‍ಕುಮಾರ್ ಮಾಹಿತಿಯಿತ್ತರು. ಕೊಡಗಿಗೆ ಸಂಬಂಧಿಸಿದಂತೆ ಕುಶಾಲನಗರ ಫಾತಿಮಾ ಕಾನ್ವೆಂಟ್ ಶಾಲೆಯ ಜಗತ್ ಪೂವಯ್ಯ (620 ಅಂಕ) ಪ್ರಥಮ ಸ್ಥಾನ, ಸೋಮವಾರಪೇಟೆ ಸಾಂದೀಪನಿ ಆಂಗ್ಲ ಮಾಧ್ಯª Àು ಶಾಲೆಯ ಎಸ್. ಗಾನಾ (618 ಅಂಕ) ಕೂಡಿಗೆ ಮೊರಾರ್ಜಿ ಶಾಲೆಯ ಎಂ.ಡಿ. ವಿಜಯ (618 ಅಂಕ) ದ್ವಿತೀಯ ಸ್ಥಾನ ಹಾಗೂ ಗೋಣಿಕೊಪ್ಪ ಲಯನ್ಸ್ ಶಾಲೆಯ ಕೆ.ಎಸ್. ಅನುಷಾ (617 ಅಂಕ) ತೃತೀಯ ಸ್ಥಾನ ಪಡೆದಿರುವದಾಗಿ ಡಿಡಿಪಿಐ ಮಚ್ಚಾಡೋ ‘ಶಕ್ತಿ’ಗೆ ತಿಳಿಸಿದ್ದಾರೆ.