ತಲಕಾವೇರಿ, ಆ. 9: ತಲಕಾವೇರಿಯಲ್ಲಿ ಕಣ್ಮರೆಯಾದ ಅರ್ಚಕ ಕುಟುಂಬದವರ ಶೋಧ ಕಾರ್ಯದ ದ್ವಿತೀಯ ದಿನವಾದ ಇಂದು ಎನ್‍ಡಿಆರ್‍ಎಫ್ ತಂಡವು ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಕಾರ್ಯನಿರ್ವಹಿಸಿತು. ದಿಢೀರಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಎನ್‍ಡಿಆರ್‍ಎಫ್ ಕೆಲಸವನ್ನು ಸ್ಥಗಿತಗೊಳಿಸಿತು. ನಿನ್ನೆಯಷ್ಟೇ ಕಣ್ಮರೆಯಾದವರ ಪೈಕಿ ಸ್ವಾಮಿ ಆನಂದ ತೀರ್ಥರ ಪಾರ್ಥಿವ ಶರೀರವನ್ನು ಹೊರತೆಗೆಯಲಾಗಿದ್ದು, ಅರ್ಚಕ ನಾರಾಯಣಾಚಾರ್ ಸೇರಿದಂತೆ ನಾಲ್ವರ ಶೋಧ ಕಾರ್ಯ ಮುಂದುವರಿಯುತ್ತಿದೆ. ಶಾಸಕ ಕೆ.ಜಿ. ಬೋಪಯ್ಯ ಅವರು ಶೋಧ ಕಾರ್ಯವು ಮಧ್ಯಾಹ್ನದ ಬಳಿಕವೂ ಮುಂದುವರೆಯಬೇಕೆಂದು ಪ್ರಯತ್ನ ನಡೆಸಿ ಆಗತಾನೇ ಆಗಮಿಸಿದ್ದ ಹಿಟಾಚಿ ಯಂತ್ರದ ಮೂಲಕ ಎಂ.ಇ.ಜಿ. ತಂಡವನ್ನು ಕೋರಿದ ಮೇರೆಗೆ ಆ ತಂಡದಿಂದ ಶೋಧ ಕಾರ್ಯ ಮುಂದುವರೆಯಿತು. ಸಂಜೆ 5 ಗಂಟೆವರೆಗೂ ತಪಾಸಣೆ ನಡೆಸಿದರೂ, ಕೇವಲ ಕೆಲವು ವಸ್ತುಗಳು ಮಾತ್ರ ಪತ್ತೆಯಾದವೇ ಹೊರತು, ಶವಗಳು ಗೋಚರವಾಗಲಿಲ್ಲ. ಸ್ಥಳದಲ್ಲಿ ಅನೇಕ ಗ್ರಾಮಸ್ಥರು ಹಾಜರಿದ್ದು, ಕುತೂಹಲಭರಿತರಾಗಿದ್ದರು. ಸೋಮವಾರ ದಿನ ಬೆಳಿಗ್ಗೆ 9 ಗಂಟೆಯಿಂದಲೇ ಶೋಧ ಕಾರ್ಯ ನಡೆಸುವಂತೆ ಎಂಇಜಿ ತಂಡದವ ರೊಂದಿಗೆ (ಮೊದಲ ಪುಟದಿಂದ) ಶಾಸಕರು ಮಾತುಕತೆ ನಡೆಸಿದರು. ಅರ್ಚಕ ಕುಟುಂಬದ ಪ್ರಶಾಂತಾಚಾರ್, ಮುರಳಿ ಹಾಗೂ ಹೊಸೂರು ಸತೀಶ್ ಕುಮಾರ್, ಕುದುಕುಳಿ ಭರತ್ ಮೊದಲಾದವರು ಈ ಸಂದರ್ಭ ಹಾಜರಿದ್ದರು.

ಇಂದು ಬೆಳಿಗ್ಗೆ ಎನ್‍ಡಿಆರ್‍ಎಫ್ ತಂಡವು ಸುಮಾರು 20 ತಂಡಗಳಂತೆ ಸರಣಿ ರೂಪದಲ್ಲಿ ಕಾರ್ಯಾಚರಣೆ ನಡೆಸಿತು. ನಾರಾಯಣಾಚಾರ್ ಪುತ್ರಿಯರ ಆಗಮನ

ಈ ನಡುವೆ ತಲಕಾವೇರಿಯ ಕಣ್ಮರೆಯಾದ ಅರ್ಚಕ ನಾರಾಯಣಾಚಾರ್ ಅವರ ಇಬ್ಬರು ಪುತ್ರಿಯರು ವಿದೇಶಗಳಿಂದ ಈಗಾಗಲೇ ನವದೆಹಲಿ ತಲುಪಿದ್ದು, ಸೋಮವಾರದಂದು ಬೆಂಗಳೂರು ತಲುಪಿ ತಲಕಾವೇರಿಗೆ ಆಗಮಿಸಲಿರುವುದಾಗಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ನಿವೃತ್ತ ಮೇಜರ್ ಡಾ. ಕೋಳಿಬೈಲು ಕುಶ್ವಂತ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.

ಇಂದು ಭಾಗಮಂಡಲ ಕಾಶಿಮಠದಲ್ಲಿ ತಂಗಿರುವ ನಾರಾಯಣಾಚಾರ್ ಅವರ ಸಹೋದರಿ ಸುಶೀಲಮ್ಮ, ಸೊಸೆ ಸಂಧ್ಯಾ ಹಾಗೂ ಅವರ ಪುತ್ರ ಮುರಳಿ ಇವರುಗಳನ್ನು ಶಾಸಕ ಬೋಪಯ್ಯ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. ಕಾರ್ಯಾಚರಣೆ ಮುಗಿಯುವವರೆಗೂ ಈ ಕುಟುಂಬ ಸದಸ್ಯರು ಕಾಶಿಮಠದಲ್ಲಿ ತಂಗಲಿರುವುದಾಗಿ ತಿಳಿದುಬಂದಿದೆ. ಈ ನಡುವೆ ಕಾಶಿಮಠದಲ್ಲಿ ಅನೇಕ ಸಂತ್ರಸ್ತರು ನೆಲೆ ಪಡೆದಿದ್ದು, ಆಹಾರ ಸರಬರಾಜಿನ ಅವ್ಯವಸ್ಥೆ ಕುರಿತು ಶಾಸಕರೊಂದಿಗೆ ತಮ್ಮ ಅಹವಾಲುಗಳನ್ನು ಹೇಳಿಕೊಂಡರು.

-ವರದಿ: ಚಿ.ನಾ. ಸೋಮೇಶ್‍ಕುಶಾಲನಗರ: ಕಳೆದ ಬಾರಿ ಬಿಜೆಪಿ ಸರಕಾರ ಘೋಷಣೆ ಮಾಡಿದ ನೆರೆ ಪರಿಹಾರ ಧನ ಇನ್ನೂ ಸಂತ್ರಸ್ತರಿಗೆ ತಲುಪಿಲ್ಲ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು. ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಕಳೆದ ಬಾರಿ ರಾಜ್ಯದಲ್ಲಿ 35 ಸಾವಿರ ಕೋಟಿ ನಷ್ಟದ ಬಗ್ಗೆ ಸರಕಾರ ವರದಿ ತಯಾರಿಸಿತ್ತು. ಆದರೆ ಕೇವಲ 1800 ಕೋಟಿ ಮಾತ್ರ ಬಿಡುಗಡೆಗೊಳಿಸಿದೆ. ಅನುದಾನದಲ್ಲಿ ಅರ್ಧದಷ್ಟು ಕೂಡ ಮನೆ ಕಳೆದುಕೊಂಡವರಿಗೆ ತಲುಪಿಲ್ಲ ಹಾಗೂ ಸೂರು ಕಳೆದುಕೊಂಡವರಿಗೆ ಮನೆ ಕೂಡ ಒದಗಿಸಿಲ್ಲ ಎಂದರು. ಇದೇ ಸಂದರ್ಭ ಶಿವಕುಮಾರ್ ಅವರು ಕುಶಾಲನಗರ ಕೊಪ್ಪ ಕಾವೇರಿ ಸೇತುವೆ ಬಳಿ ತುಂಬಿ ಹರಿಯುತ್ತಿರುವ ಕಾವೇರಿ ನದಿಯನ್ನು ವೀಕ್ಷಣೆ ಮಾಡಿದರು.