ಮಡಿಕೇರಿ, ಆ. 9: ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿರುವ ಕೊಡಗಿನಲ್ಲಿ ಶಾಶ್ವತ ರಕ್ಷಣಾ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಇಲ್ಲಿನ ಶಾಸಕರುಗಳೊಂದಿಗೆ ತಾನು ಚರ್ಚಿಸಿದ್ದು, ಈ ಸಂಬಂಧ ಜಿಲ್ಲಾಧಿ ಕಾರಿಗಳಿಂದ ವರದಿ ತರಿಸಿಕೊಂಡು ಕೂಡಲೇ ಕಾರ್ಯೊನ್ಮುಖವಾಗು ವದಾಗಿ ರಾಜ್ಯದ ಕಂದಾಯ ಇಲಾಖಾ ಸಚಿವ ಆರ್. ಅಶೋಕ್ ಹೇಳಿದರು.ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಭೂ ಕುಸಿತ ಉಂಟಾದ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಲಕಾವೇರಿಯಲ್ಲಿ ನಡೆಯು ತ್ತಿರುವ ಮೃತದೇಹ ಪತ್ತೆ ಕಾರ್ಯಾ ಚರಣೆ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ತಾನು ಮಾಹಿತಿ ಪಡೆದಿದ್ದು, ಎರಡು ದಿನಗಳಲ್ಲಿ ಕಾರ್ಯಾಚರಣೆ ಮುಗಿಸಲು ಎರಡು ಮೂರು ಹಿಟಾಚಿ, ಎರಡು ಸರ್ಚ್ ಲೈಟ್ ಬಳಸುವ ಮೂಲಕ ಪಾಳಿ ಆಧಾರದಲ್ಲಿ ಐದು ತಂಡಗಳಾಗಿ ಕೆಲಸ ಮಡಿಕೇರಿ, ಆ. 9: ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿರುವ ಕೊಡಗಿನಲ್ಲಿ ಶಾಶ್ವತ ರಕ್ಷಣಾ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಇಲ್ಲಿನ ಶಾಸಕರುಗಳೊಂದಿಗೆ ತಾನು ಚರ್ಚಿಸಿದ್ದು, ಈ ಸಂಬಂಧ ಜಿಲ್ಲಾಧಿ ಕಾರಿಗಳಿಂದ ವರದಿ ತರಿಸಿಕೊಂಡು ಕೂಡಲೇ ಕಾರ್ಯೊನ್ಮುಖವಾಗು ವದಾಗಿ ರಾಜ್ಯದ ಕಂದಾಯ ಇಲಾಖಾ ಸಚಿವ ಆರ್. ಅಶೋಕ್ ಹೇಳಿದರು.

ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಭೂ ಕುಸಿತ ಉಂಟಾದ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತಲಕಾವೇರಿಯಲ್ಲಿ ನಡೆಯು ತ್ತಿರುವ ಮೃತದೇಹ ಪತ್ತೆ ಕಾರ್ಯಾ ಚರಣೆ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ತಾನು ಮಾಹಿತಿ ಪಡೆದಿದ್ದು, ಎರಡು ದಿನಗಳಲ್ಲಿ ಕಾರ್ಯಾಚರಣೆ ಮುಗಿಸಲು ಎರಡು ಮೂರು ಹಿಟಾಚಿ, ಎರಡು ಸರ್ಚ್ ಲೈಟ್ ಬಳಸುವ ಮೂಲಕ ಪಾಳಿ ಆಧಾರದಲ್ಲಿ ಐದು ತಂಡಗಳಾಗಿ ಕೆಲಸ ಎಂಜಿನಿಯರ್‍ಗಳಿಗೆ ಆರ್. ಅಶೋಕ್ ಅವರು ಸ್ಪಷ್ಟ ನಿರ್ದೇಶನ ನೀಡಿರುವದಾಗಿ ತಿಳಿಸಿದರು. ಪ್ರಕೃತಿ ವಿಕೋಪ ನಿರ್ವಹಣೆಗೆ ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಹಣವಿದ್ದು, ಕೇಂದ್ರ ಸರ್ಕಾರ ರೂ. 310 ಕೋಟಿ ರೂ, ನೀಡಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಅವರ ಪಿಡಿ ಖಾತೆಗಳಲ್ಲಿ ಹೆಚ್ಚಿನ ಹಣವಿದ್ದು, ಈಗ ಪ್ರಕೃತಿ ವಿಕೋಪ ನಿರ್ವಹಣೆಗೆ 5 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಪ್ರಕೃತಿ ವಿಕೋಪ ಸಂಬಂಧ ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೀಡಿಯೋ ಸಂವಾದವಿದ್ದು, ರಾಜ್ಯದ ಪರಿಸ್ಥಿಯ ಬಗ್ಗೆ ಮಾಹಿತಿ ನೀಡಲಾಗುವದು. ಜೊತೆಗೆ ಹೆಚ್ಚಿನ ಹಣ ಬಿಡುಗಡೆಗೆ ಮನವಿ ಮಾಡಲಾಗುವುದು ಎಂದು ಆರ್. ಅಶೋಕ್ ತಿಳಿಸಿದರು.

ಪ್ರಕೃತಿ ವಿಕೋಪವನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ರಾಜ್ಯದ ಉತ್ತರ ಭಾಗದಲ್ಲಿಯೂ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಗಮನ ಹರಿಸಲಾಗಿದೆ. ಪ್ರಕೃತಿ ವಿಕೋಪದಿಂದ ಉಂಟಾಗಿರುವ ಬೆಳೆ ಹಾನಿಗೆ ಪರಿಹಾರ ನೀಡಲಾಗುವುದು ಎಂದರು.