ನಾಪೆÇೀಕ್ಲು, ಆ. 10: ಕಳೆದ ಎರಡು ದಿನಗಳಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆಗೊಂಡ ಹಿನ್ನೆಲೆಯಲ್ಲಿ ಎಲ್ಲಾ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದೆ.
ಮಳೆ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ನಾಪೆÇೀಕ್ಲು ಸಂತೆಯಲ್ಲಿ ವ್ಯಾಪಾರಸ್ಥರ ಹಾಗೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ವ್ಯಾಪಾರಸ್ಥರ ಸಂಖ್ಯೆ ಕಡಿಮೆಯಿದ್ದ ಕಾರಣ ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಎಲ್ಲಾ ತರಕಾರಿಗಳು ಖಾಲಿಯಾಗಿ ಗ್ರಾಹಕರು ಪರದಾಡುವ ಪರಿಸ್ಥಿತಿ ಉಂಟಾಯಿತು.
ಮಳೆ ಕಡಿಮೆಗೊಂಡಿದ್ದರೂ, ಮೋಡ ಕವಿದ ವಾತಾವರಣದಿಂದ ಜನ ಪುನಃ ಮಳೆ ಯಾವಾಗ ಆರಂಭವಾಗುವದೋ ಎಂಬ ಭೀತಿ ಎದುರಿಸುವಂತಾಗಿದೆ.
ಶಿಕ್ಷಕರಿಂದ ಶಾಲೆಯ ಶುಚಿತ್ವ
ಕಾವೇರಿ ನದಿಯಲ್ಲಿ ಪ್ರವಾಹ ಉಂಟಾದ ಕಾರಣದಿಂದ ಸಮೀಪದ ಚೆರಿಯಪರಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಳುಗಡೆ ಯಾಗಿತ್ತು. ಈಗ ಪ್ರವಾಹ ಕಡಿಮೆಯಾದ ಹಿನ್ನೆಲೆಯಲ್ಲಿ ಶಿಕ್ಷಕರಾದ ಧರ್ಮೇಂದ್ರ ಮತ್ತು ಸುಕುಮಾರ್ ತೆಪ್ಪದಲ್ಲಿ ಶಾಲೆಗೆ ತೆರಳಿ ಶಾಲೆಯ ಒಳಗೆ ತುಂಬಿದ್ದ ಕೆಸರನ್ನು ಶುಚಿಗೊಳಿಸಿದರು. -ಪ್ರಭಾಕರ್