ಕೂಡಿಗೆ, ಆ. 8: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿರುವ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಿಂದ ನದಿಗೆ ನೀರನ್ನು ಹರಿಯಬಿಟ್ಟಿರುವ ಸುಂದರವಾದ ದೃಶ್ಯವನ್ನು ನೋಡಲು ಪ್ರವಾಸಿಗರ ದಂಡು ಕಂಡುಬರುತ್ತಿದೆ. ಹಾರಂಗಿ-ಸೋಮವಾರಪೇಟೆಗೆ ಹೋಗುವ ಮಾರ್ಗದಲ್ಲಿ ರಸ್ತೆಯಲ್ಲಿ ನಿಂತು ಹಾರಂಗಿ ಅಣೆಕಟ್ಟೆಯಿಂದ ನಾಲ್ಕು ಕ್ರೇಸ್ಟ್ ಗೇಟ್ ಮೂಲಕ ಬಿಡಲಾದ ನೀರನ್ನು ವೀಕ್ಷಣೆ ಮಾಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. -ಕೆ.ಕೆ.ಎನ್. ಶೆಟ್ಟಿ