ಸಿದ್ದಾಪುರ, ಆ. 8: ನೆಲ್ಯಹುದಿಕೇರಿ ಪರಿಹಾರ ಕೇಂದ್ರಕ್ಕೆ ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಸಂತ್ರಸ್ತರ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಂತ್ರಸ್ತರು ತಾವುಗಳು ಪ್ರವಾಹಕ್ಕೆ ಸಿಲುಕಿ ಕಳೆದೆರಡು ವರ್ಷಗಳಿಂದ ಸಂಕಷÀ್ಟದಲ್ಲಿದ್ದೇವೆ ತಮಗೆ ಸರಕಾರವು ಪುನರ್ವಸತಿ ಕಲ್ಪಿಸಿ ಕೊಡಲು ವಿಳಂಬ ಮಾಡುತ್ತಿದೆ ಎಂದು ದೂರಿದರು. ಪರಿಹಾರ ಕೇಂದ್ರದಲ್ಲಿ ಅಗತ್ಯ ವಸ್ತುಗಳು ಲಭಿಸುತ್ತಿಲ್ಲ ಎಂದು ಗಮನಸೆಳೆದರು. ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಶಿವಕುಮಾರ್ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್; ಪ್ರವಾಹದಿಂದ ಸಿಲುಕಿದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳ ಸಮಸ್ಯೆ ಯನ್ನು ಆಲಿಸಲು ಬಂದಿರುವುದಾಗಿ ತಿಳಿಸಿದರು. ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.