ಶ್ರೀಮಂಗಲ, ಆ. 8: ಕೋವಿಡ್ -19 ಸೋಂಕು ಹಿನೆÀ್ನಲೆ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಮಣ್ಣು ಹಾಕಿ ಮುಚ್ಚಿದ್ದ ಕೊಡಗು ಗಡಿಯ ಅಂತರಾಜ್ಯ ರಸ್ತೆಯನ್ನು ಶುಕ್ರವಾರ ಸಂಜೆಯಿಂದ ಕುಟ್ಟ ಸಮೀಪ ಅಂತರಾಜ್ಯ (ಕರ್ನಾಟಕ -ಕೇರಳ) ಗೇಟ್ ತೆರೆಯಲಾಗಿದೆ. ಆದರೆ ಕೇರಳ ಕಡೆಯಿಂದ ನೂರಾರು ಸರಕು ಮತ್ತು ಪ್ರಯಾಣಿಕರ ವಾಹನ ಕೊಡಗಿನ ಒಳಗೆ ಪ್ರವೇಶಿಸುತ್ತಿದ್ದರೂ, ಕುಟ್ಟ ಚೆಕ್ ಪೆÇೀಸ್ಟ್ನಲ್ಲಿ ಯಾವುದೇ ಕೋವಿಡ್-19 ಸೋಂಕು ಮತ್ತು ವಾಹನ ತಪಾಸಣೆ ಮಾಡುತ್ತಿಲ್ಲ ಎಂದು ವೀರಾಜಪೇಟೆ ತಾಲೂಕು ಬಿ.ಜೆ.ಪಿ. ಸಮಿತಿ ಸದಸ್ಯ ಮುಕ್ಕಾಟಿರ ನವೀನ್ ಅಯ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರಿಂದ ಕೇರಳದಿಂದ ಎಲ್ಲಾ ವಾಹನಗಳು ಕೊಡಗು ಪ್ರವೇಶಿಸುತ್ತಿವೆ. ಈ ಬಗ್ಗೆ ಕೊಡಗು ಭಾಗದ ಗೇಟ್ನಲ್ಲಿ ಯಾವುದೇ ತಪಾಸಣೆ ಮಾಡುತ್ತಿಲ್ಲ. ಸರಕು ತುಂಬಿದ ಲಾರಿ, ಪ್ರಯಾಣಿಕರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಕೊಡಗು ಪ್ರವೇಶಿಸುತ್ತಿವೆ.
ಆದರೆ ಕೊಡಗಿನಿಂದ ಕೇರಳ ಪ್ರವೇಶಿಸಲು ಯಾವುದೇ ಪ್ರಯಾಣಿಕರ ವಾಹನಕ್ಕೆ ಕೇರಳ ರಾಜ್ಯದ ಚೆಕ್ ಪೆÇೀಸ್ಟ್ನಲ್ಲಿ ಅವಕಾಶ ನೀಡುತ್ತಿಲ್ಲ. ಸರಕು ತುಂಬಿದ ಗರಿಷ್ಠ 6 ಚಕ್ರದ ಲಾರಿಗೆ ತಪಾಸಣೆ ನಡೆಸಿ ಅವಕಾಶ ನೀಡಲಾಗುತ್ತಿದೆ. 6 ಚಕ್ರಕ್ಕಿಂತ ಹೆಚ್ಚಿನ ಮಲ್ಟಿ ಎಕ್ಸ್ಲ್ ಲಾರಿಗಳಿಗೆ ಪ್ರವೇಶಿಸಲು ಅವಕಾಶವನ್ನು ನೀಡುತ್ತಿಲ್ಲ.
ಕೇರಳ ಕಡೆಯಿಂದ ಕೊಡಗು ಪ್ರವೇಶಿಸುತ್ತಿರುವ ನೂರಾರು ವಾಹನದ ತಪಾಸಣೆ, ಕೋವಿಡ್-19 ಸೋಂಕು ತಪಾಸಣೆಯನ್ನು ಮಾಡಲಾಗುತ್ತಿಲ್ಲ. ಇದರಿಂದ ಕೊಡಗು ಜಿಲ್ಲೆಯಲ್ಲಿ ಕೋವಿಡ್-ಸೋಂಕು ವ್ಯಾಪಕವಾಗಿ ಹರಡುವ ಅಪಾಯವಿದೆ.
ಈ ಬಗ್ಗೆ ಸ್ಥಳೀಯ ಪೆÇಲೀಸ್ ಮತ್ತು ಕಂದಾಯ ಅಧಿಕಾರಿಗಳನ್ನು ವಿಚಾರಿಸಿದರೆ, ತಪಾಸಣೆ ಮಾಡಲು ನಮಗೆ ಯಾವುದೇ ಆದೇಶ ಬಂದಿಲ್ಲ ಎಂದು ಹೇಳಿದ್ದಾರೆ ಎಂದು ಮುಕ್ಕಾಟಿರ ನವೀನ್ ಅಯ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.