ಶ್ರೀಮಂಗಲ, ಆ. 8: ಶ್ರೀಮಂಗಲ ವಿದ್ಯುತ್ ಸರಬರಾಜು ಕೇಂದ್ರದ ಮುಂದೆ, ಸಮಾಜ ಸೇವಕ-ಬೆಳೆಗಾರ ಮಚ್ಚಮಾಡ ವಿಜಯ್ ಏಕಾಂಗಿ ಸತ್ಯಾಗ್ರಹ ಮಾಡುತ್ತಿದ್ದಾರೆ. ವಿದ್ಯುತ್ ಕೇಂದ್ರದಿಂದ ಕೇವಲ ಒಂದೇ ವಿದ್ಯುತ್ ಕಂಬದ ದೂರದಲ್ಲಿರುವ ವಿಜಯ್ ಮನೆಯ ಸಮೀಪವೇ ಬಿ.ಎಸ್.ಎನ್.ಎಲ್. ಟವರ್ ಇದೆ. ಮನೆಗೆ ಮತ್ತು ಟವರ್‍ಗೆ ವಿದ್ಯುತ್ ಸಂಪರ್ಕ ನೀಡದೇ ಇರುವ ಇಲಾಖೆ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಕೇಂದ್ರದಲ್ಲಿ ಒಂದು ಲೈನ್ ಮ್ಯಾನ್ ಮತ್ತು ಅಧಿಕಾರಿ ಇಲ್ಲ. ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ವಿಜಯ್ ಸತ್ಯಾಗ್ರಹ ಮಾಡುತ್ತಿದ್ದಾರೆ.