ಸಿದ್ದಾಪುರ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ರಾಜ್ಯಾಧ್ಯಕ್ಷರನ್ನು ಬರಮಾಡಿಕೊಳ್ಳಲು ಮಾಲ್ದಾರೆ ಚೆಕ್ ಪೆÇೀಸ್ಟ್ ಬಳಿ ಸಾಕಷ್ಟು ಸಮಯ ಕಾದು ನಿಂತು ರಾಜ್ಯಾಧ್ಯಕ್ಷರನ್ನು ಸ್ವಾಗತಿಸಲು ನಿಂತಿದ್ದರು. ಆದರೆ ಶಿವಕುಮಾರ್ ಅವರು ಕುಶಾಲನಗರ ಮಾರ್ಗವಾಗಿ ನೆಲ್ಯಹುದಿಕೇರಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು. ಕರಡಿಗೋಡು ಹರಿಹರ ಕೇಂದ್ರಕ್ಕೆ ಭೇಟಿ ನೀಡದ ಬಗ್ಗೆ ಅಸಮಾಧಾನ ಗೊಂಡ ಕಾಂಗ್ರೆಸ್ ಪಕ್ಷದ ಕಾರ್ಯ ಕರ್ತರು ನೆಲ್ಲಿಹುದಿಕೇರಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಅಸಮಾಧಾನ ವ್ಯಕ್ತಪಡಿಸಿ ಪ್ರಶ್ನೆಗಳ ಸುರಿಮಳೆಗೈದರು.

ಮಾಲ್ದಾರೆಯಿಂದ ಸಿದ್ದಾಪುರಕ್ಕೆ ಕೇವಲ ಹತ್ತು ಕಿಲೋಮೀಟರ್ ದೂರವಿದ್ದರೂ ಕೂಡ ರಾಜ್ಯಾಧ್ಯಕ್ಷರು ಪರಿಹಾರ ಕೇಂದ್ರಕ್ಕೆ ಭೇಟಿ ನೀಡದಿರುವುದು ಬಗ್ಗೆ ತೀವ್ರತರದ ಚರ್ಚೆ ನಡೆಯಿತು. ಈ ಸಂದರ್ಭ ಜಿಲ್ಲಾಧ್ಯಕ್ಷ ಮಂಜುನಾಥ್, ಜಿ.ಪಂ. ಸದಸ್ಯರುಗಳಾದ ಚಂದ್ರಕಲಾ, ಸುನಿತಾ ಮಂಜುನಾಥ್, ವಿವಿಧ ಬ್ಲಾಕ್ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಜರಿದ್ದರು.