ಮಡಿಕೇರಿ, ಆ. 8: ಇಲ್ಲಿಗೆ ಸನಿಹದ ಮದೆ ಗ್ರಾ.ಪಂ. ವ್ಯಾಪ್ತಿಯ ಸಾಲಾಪು ಬಳಿ ಇರುವ ಕರಡಿ ಬೆಟ್ಟದಲ್ಲಿ ಅಪಾಯದ ಸೂಚನೆ ಕಂಡುಬರುತ್ತಿದೆ. ಬೆಟ್ಟದಲ್ಲಿ ಜಲಮೂಲವಿದ್ದು, ಶುದ್ಧವಾದ ಜಲ ನೀರು ಹರಿಯುತ್ತದೆ. ಆದರೆ ಇದೀಗ ಶುದ್ಧ ನೀರಿನ ಬದಲಿಗೆ ಕೆಸರು ಮಿಶ್ರಿತ ನೀರು ಹರಿದು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಬೆಟ್ಟದ ಮೇಲೆ ಅನತಿ ದೂರದವರೆಗೆ ಸ್ಥಳೀಯರು ಹೋಗಿ ನೋಡಿದ್ದು ದೂರದಲ್ಲಿ ಕೊಂಚ ಮಣ್ಣು ಜಗ್ಗಿರುವ ಹಾಗೆ ಕಾಣುತ್ತಿರುವುದಾಗಿ ಹೇಳಿದ್ದಾರೆ. ಭಯದಿಂದ ಮೇಲೆರದೆ ವಾಪಸ್ ಬಂದಿದ್ದಾರೆ. ಇದೀಗ ಕೆಳ ಪ್ರದೇಶದಲ್ಲಿ ನೆಲೆಸಿರುವ ಮಂದಿ ಮನೆ ಖಾಲಿ ಮಾಡಿ ಕೆಳಭಾಗಕ್ಕೆ ಸ್ಥಳಾಂತರಗೊಂಡಿದ್ದಾರೆ.

ಆತಂಕಕೊಳಗಾಗಿರುವ ಜನತೆ ಸಂಬಂಧಪಟ್ಟ ಇಲಾಖೆ, ತಜ್ಞರು ಸ್ಥಳ ಪರಿಶೀಲನೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. 2018ರಲ್ಲಿ ಮದೆ ಪಂಚಾಯಿತಿ ವ್ಯಾಪ್ತಿ ಸೇರಿದಂತೆ ಎರಡನೇ ಮೊಣ್ಣಂಗೇರಿಯಲ್ಲಿ ಭಾರೀ ಭೂಕುಸಿತವಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.