ಕೂಡಿಗೆ, ಆ. 7: ಮದ್ಯದ ಅಮಲಿನಲ್ಲಿ ಕೂಡಿಗೆಯ ಬ್ರಿಟಿಷರ ಕಾಲದ ಸೇತುವೆಯ ಮೇಲಿನ ದೊಡ್ಡ ಕಂಬಗಳನ್ನು ಏರಿ ಯುವಕನೋರ್ವ ನಡೆಯುವ ಹುಚ್ಚು ಸಾಹಸ ಮಾಡಿದ್ದಾನೆ. ಕೆಳ ಭಾಗದಲ್ಲಿ ಹಾರಂಗಿ ನದಿ ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಅದರೂ ಈ ಯುವಕ ಸಾಹಸ ಮಾಡಲು ಹೋಗಿದ್ದಾನೆ. ನಂತರ ಸಾರ್ವಜನಿಕರ ಕೂಗಾಟದಿಂದ ರಸ್ತೆಯ ಎಡಭಾಗಕ್ಕೆ ಬಿದ್ದು ಬದುಕಿದ್ದಾನೆ.