ಮಡಿಕೇರಿ, ಆ. 7: ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ತಾ. 8 ರಂದು (ಇಂದು) ಬೆಳಿಗ್ಗೆ 9 ಗಂಟೆಗೆ ಕುಶಾಲನಗರ ಪ್ರವಾಹ ಪೀಡಿತ ಪ್ರದೇಶಗಳಾದ ಕುವೆಂಪು ಹಾಗೂ ಸಾಯಿ ಬಡಾವಣೆ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ 3.30 ಗಂಟೆಗೆ ದಕ್ಷಿಣಕೊಡಗಿನ ಕರಡಿಗೊಡು, ವೀರಾಜಪೇಟೆ ಅಯ್ಯಪ್ಪ ಬೆಟ್ಟ ಹಾಗೂ ನಿಟ್ಟೂರು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.