ಮಡಿಕೇರಿ, ಆ. 7: ಜಿಲ್ಲೆಯಲ್ಲಿ ಹೊಸದಾಗಿ 29 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ, ಈ ಪೈಕಿ ಒಬ್ಬರು ಸಾವನ್ನಪ್ಪಿದ್ದಾರೆ. ಇದುವರೆಗೆ 639 ಪ್ರಕರಣಗಳು ಪತ್ತೆಯಾಗಿದ್ದು, 402 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 11 ಮಂದಿ ಮೃತಪಟ್ಟಿದ್ದು 226 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ 184 ನಿಯಂತ್ರಿತ ಪ್ರದೇಶಗಳಿವೆ.