ಮಡಿಕೇರಿ, ಆ. 7: ಆಗಸ್ಟ್ 2ರಿಂದ ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಯ ಪರಿಣಾಮವಾಗಿ ವೀರಾಜಪೇಟೆ ಹಾಗೂ ಮಡಿಕೇರಿ ಅರಣ್ಯ ಉಪ ವಿಭಾಗದಲ್ಲಿ ಸಾರ್ವಜನಿಕ ರಸ್ತೆಗೆ ಸುಮಾರು 200 ಕ್ಕೂ ಅಧಿಕ ಮರಗಳು ಬಿದ್ದಿದ್ದು ಇವುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಇತರ ಇಲಾಖೆಯ ಸಹಕಾರದೊಂದಿಗೆ ತೆರವುಗೊಳಿಸಿದೆ. ವೀರಾಜಪೇಟೆ ವಿಭಾಗದಲ್ಲಿ 104 ಹಾಗೂ ಮಡಿಕೇರಿ ವಿಭಾಗದಲ್ಲಿನ ವಿವಿಧ ರಸ್ತೆಗಳಲ್ಲಿ ಸುಮಾರು 110 ಮರಗಳು ಬಿದ್ದಿದ್ದು ಇದನ್ನು ತೆರವುಗೊಳಿಸಲಾಗಿದೆ. ಸಾರ್ವಜನಿಕ ರಸ್ತೆಗೆ ಬಿದ್ದ ಮರಗಳ ಸಂಖ್ಯೆ ಇಷ್ಟಾದರೆ ಇನ್ನು ಖಾಸಗಿ ಜಾಗ - ತೋಟಗಳಲ್ಲಿ ಬಿದ್ದ ಮರಗಳ ಸಂಖ್ಯೆ ಇನ್ನಷ್ಟು ಹೆಚ್ಚಿದೆ.