ಬಿರುನಾಣಿ ಪುತ್ತ್ ಭಗವತಿ: ರಾಮ ಮಂದಿರ ನಿರ್ಮಾಣ ಹಿನ್ನೆಲೆ ಬಿರುನಾಣಿ ಪುತ್ತ್ ಭಗವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಈ ಹಿಂದೆ ಕರಸೇವೆಯಲ್ಲಿ ಪಾಲ್ಗೊಂಡ ಕಾಳಿಮಾಡ ರಮೇಶ್, ಅಣ್ಣಳಮಾಡ ಮುತ್ತಪ್ಪ, ಕರ್ತಮಾಡ ಸುರೇಶ್ ಅವರಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಬಿಜೆಪಿ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಹಾಜರಿದ್ದರು.ಕ್ಯಾಂಟೀನ್‍ನಲ್ಲಿ: ಸೋಮವಾರಪೇಟೆಯ ಖಾಸಗಿ ಬಸ್ ನಿಲ್ದಾಣದ ಶ್ರೀ ರಾಘವೇಂದ್ರ ಕ್ಯಾಂಟೀನ್‍ನಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಾಲೀಕ ಅಭಿಷೇಕ್ ಗೋವಿಂದಪ್ಪ, ಅನಿಲ್, ಮಹೇಶ್, ರವಿ, ರಾಘವ, ಸುಬ್ರಮಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಐಗೂರಿನಲ್ಲಿ: ಐಗೂರಿನ ಸ್ಥಾನೀಯ ಬಿಜೆಪಿ ಮತ್ತು ಭಜರಂಗದಳದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರಸೇವಕ ಪ್ರಭಾಕರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಚ್ಚಂಡ ಪ್ರಕಾಶ್, ತಾ.ಪಂ. ಮಾಜಿ ಸದಸ್ಯ ಡಿ.ಎಸ್. ಪೊನ್ನಪ್ಪ, ಭಜರಂಗದಳದ ಭರತ್, ಅಶ್ವಥ್, ಯತೀಶ್, ಮಹೇಶ್, ಆರ್. ವಿಜಯ್, ಚನ್ನಕೇಶವ, ಭಾಸ್ಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ಐಗೂರಿನ ಮುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಗಡಿಭಾಗದಲ್ಲಿ: ಕೊಡಗು-ಹಾಸನ ಗಡಿಭಾಗದ ಗ್ರಾಮವಾದ ಬೆಟ್ಟಗಳಲೆಯಲ್ಲಿ ಹಿಂದೂಪರ ಸಂಘಟನೆಗಳ ಪ್ರಮುಖರು ಪೂಜೆ ಸಲ್ಲಿಸಿದರು. ಗ್ರಾಮದಲ್ಲಿನ ಭಗವಾಧ್ವಜಕ್ಕೆ ಪೂಜೆ ಸಲ್ಲಿಸಿ, ರಾಮಮಂದಿರ ಶೀಘ್ರವಾಗಿ ನಿರ್ಮಾಣವಾಗಲೆಂದು ಪ್ರಾರ್ಥಿಸಿದರು. ಇದರೊಂದಿಗೆ ಪಟ್ಟಣದ ವಿವಿಧ ದೇವಾಲಯ, ಮನೆಗಳಲ್ಲೂ ಪೂಜೆ ನೆರವೇರಿದವು.