*ಗೋಣಿಕೊಪ್ಪಲು, ಆ. 7: ಇಲ್ಲಿನ ರೋಟರಿ ಸಂಸ್ಥೆ ಆಶ್ರಯದಲ್ಲಿ ಕೈಕೇರಿ ರೋಟರಿ ಭವನದಲ್ಲಿ ಅಂತರರಾಷ್ಟ್ರೀಯ ಹುಲಿ ಸಂರಕ್ಷಣಾ ದಿನ ಹಾಗೂ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಮೂಕಳೇರ ಬೀಟಾ ಲಕ್ಷ್ಮಣ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಂಪದ್ಭರಿತ ಅರಣ್ಯ ಸಮತೋಲನಕ್ಕೆ ಹುಲಿ ಪ್ರಮುಖ ಕಾರಣವೆಂದು ವನ್ಯಪ್ರೇಮಿ ಕೋಟ್ರಂಗಡ ಎಂ. ಚಿಣ್ಣಪ್ಪ ಅವರು ‘ಸ್ಲೈಡ್ ಶೋ’ ಮೂಲಕ ಮಾಹಿತಿ ನೀಡಿದರು.

ಈ ಸಂದರ್ಭ ಕೆ.ಎಂ. ಚಿಣ್ಣಪ್ಪ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಗೋಣಿಕೊಪ್ಪಲಿನಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಡಾ. ಕೆ.ಪಿ. ಚಿಣ್ಣಪ್ಪ, ಡಾ. ಕೆ.ಎನ್. ಚಂದ್ರಶೇಖರ್ ಹಾಗೂ ಡಾ. ಎಂ.ಪಿ. ಆಶಿಕ್ ಚಂಗಪ್ಪ ಅವರುಗಳನ್ನು ಮುಖ್ಯ ಅತಿಥಿಗಳಾದ ಕೆ.ಎಂ. ಚಿಣ್ಣಪ್ಪ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ರೋಟರಿ ಅಧ್ಯಕ್ಷ ಸಿ.ಜಿ. ಕುಶಾಲಪ್ಪ, ಎಂ.ಕೆ. ದೀನಾ, ಇಮ್ಮಿ ಉತ್ತಪ್ಪ, ದಿಲನ್ ಚಂಗಪ್ಪ, ಟಿ.ಯು. ನರೇಂದ್ರ, ಕಿಶೋರ್ ಮಾದಪ್ಪ, ರಾಜೀವ ಕೆ.ಜಿ., ಸುಮಿ ಸುಬ್ಬಯ್ಯ, ಪ್ರಮೋದ್ ಕಾಮತ್, ಗಣಪತಿ, ಅಧ್ಯಕ್ಷೆ ಮೂಕಳೇರ ಬೀಟಾ, ಲತಾ ಬೋಪಣ್ಣ, ಕಳ್ಳಿಚಂಡ ಮುತ್ತಪ್ಪ ಮುಂತಾದವರು ಉಪಸ್ಥಿತರಿದ್ದರು. ಬೆಂಗಳೂರಿನ ವನ್ಯಪ್ರೇಮಿ ಗೋಪಿ ಇದ್ದರು.