ಶನಿವಾರಸಂತೆ, ಆ. 6: ಶನಿವಾರಸಂತೆ ಗ್ರಾ.ಪಂ. ವ್ಯಾಪ್ತಿಯ ತ್ಯಾಗರಾಜ ಕಾಲೋನಿಯ 49 ವರ್ಷ ಪ್ರಾಯದ ಪುರುಷನಿಗೆ ಕೋವಿಡ್ ದೃಢಪಟ್ಟಿರುವುದರಿಂದ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲಾಯಿತು. ಶನಿವಾರಸಂತೆ ಪಂಚಾಯಿತಿ ವತಿಯಿಂದ ಸೋಂಕಿತರ ಮನೆಯ ಸುತ್ತಮುತ್ತ ಸಾರ್ವನಿಕರ ರಸ್ತೆಗೆ ಔಷಧಿ ಸಿಂಪಡಿಸಲಾಯಿತು ಹಾಗೂ ನಿರ್ಬಂಧಿತ ಪ್ರದೇಶ ಎಂದು ಸೀಲ್ ಡೌನ್ ಮಾಡಲಾಯಿತು.

ಸ್ಥಳದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಕಂದಾಯ ಪರಿವೀಕ್ಷಕ ನಂದಕುಮಾರ್, ಗ್ರಾಮ ಲೆಕ್ಕಿಗ ಮಂಜುನಾಥ, ಆಶಾಕಾರ್ಯಕರ್ತೆ ಉಷಾ, ಗ್ರಾಮ ಸಹಾಯಕ ಮಂಜೇಶ್ ಹಾಜರಿದ್ದರು.