ಸೋಮವಾರಪೇಟೆ, ಆ. 6: ಕಳೆದ ತಾ. 2.7.2020ರಂದು ನಾಪತ್ತೆ ಯಾಗಿದ್ದ ಸೂರ್ಲಬ್ಬಿ ಗ್ರಾಮದ ನಿವಾಸಿ, ಅಂಚೆ ಇಲಾಖಾ ನೌಕರರಾಗಿದ್ದ ಮಹೇಶ್ ಅವರು ಪತ್ತೆಯಾಗಿದ್ದು, ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

ಕಳೆದ ಜುಲೈ 2 ರಂದು ಸೂರ್ಲಬ್ಬಿ ಗ್ರಾಮದ ಮನೆಯ ಸಮೀಪ ಬೈಕ್ ಸೇರಿದಂತೆ ಇತರ ವಸ್ತುಗಳನ್ನು ಬಿಟ್ಟು ನಾಪತ್ತೆಯಾಗಿದ್ದ ಬಗ್ಗೆ, ಮಹೇಶ್ ಅವರ ತಂದೆ ಸೋಮವಾರಪೇಟೆ ಪೆÇಲೀಸ್ ಠಾಣೆಗೆ ದೂರು ನೀಡಿದ್ದರು.

ಪೆÇಲೀಸರು ಎಲ್ಲಾ ರೀತಿಯಲ್ಲೂ ಹುಡುಕಾಟ ನಡೆಸಿದ್ದರೂ ಯಾವದೇ ಮಾಹಿತಿ ಲಭ್ಯವಾಗಿರಲಿಲ್ಲ. ನಾಪತ್ತೆಯಾಗಿದ್ದ ಮಹೇಶ್,ನಿನ್ನೆ ದಿನ ಪತ್ತೆಯಾಗಿದ್ದು, ಇದೀಗ ಮನೆ ಸೇರಿದ್ದಾರೆ. ಚೆಯ್ಯಂಡಾಣೆಯ ಅಂಚೆ ಇಲಾಖೆಯಲ್ಲಿ ನೌಕರರಾಗಿದ್ದ ಮಹೇಶ್ ಅವರ ಮೇಲೆ, ಸೂರ್ಲಬ್ಬಿ ಗ್ರಾಮದ ಅಂಚೆ ಕಚೇರಿಯಲ್ಲಿ ಸಾರ್ವಜನಿಕರ ಅಂಚೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪವಿದ್ದು, ಪ್ರಕರಣವೂ ದಾಖಲಾಗಿತ್ತು.

ಇದಾದ ಕೆಲ ದಿನಗಳ ನಂತರ ಮಹೇಶ್ ಅವರು ದಿಢೀರ್ ನಾಪತ್ತೆಯಾಗಿದ್ದರಿಂದ ಪ್ರಕರಣ ಕುತೂಹಲ ಕೆರಳಿಸಿತ್ತು.

ನಿನ್ನೆ ದಿನ ತಾಕೇರಿ ಗ್ರಾಮದ ಸಂಬಂಧಿಕರ ಮನೆಗೆ ಆಗಮಿಸಿ, ಇಂದು ಪೆÇಲೀಸ್ ಠಾಣೆಗೆ ತೆರಳಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.

ಕಳೆದ ಜುಲೈ 1ರಂದು ಕೆಲಸಕ್ಕೆ ಹಾಜರಾಗದೇ ಸೂರ್ಲಬ್ಬಿ ಗ್ರಾಮದ ಮನೆಗೆ ಬಂದಿದ್ದ ಮಹೇಶ್, ಮನೆ ಸಮೀಪದ ತೋಟದಲ್ಲಿ ಬೈಕ್ ಹಾಗೂ ಇತರ ವಸ್ತುಗಳನ್ನು ಬಿಟ್ಟು ಸೋಮವಾರಪೇಟೆ ಪಟ್ಟಣದವರೆಗೆ ಕಾಲ್ನಡಿಗೆಯಲ್ಲಿ ತೆರಳಿ, ನಂತರ ಬೆಂಗಳೂರಿಗೆ ತೆರಳಿದ್ದರು.

ಅಲ್ಲಿ ಹಲವಷ್ಟು ಕಡೆಗಳಲ್ಲಿ ಕೆಲಸ ಹುಡುಕಿದರೂ ಯಾವದೇ ಕೆಲಸ ಸಿಕ್ಕಿರಲಿಲ್ಲ. ಇದರಿಂದಾಗಿ ದೇವಾಲಯ, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಲ್ಲಿ ತಂಗುತ್ತಿದ್ದ ಮಹೇಶ್, ಅಂತಿಮವಾಗಿ ನಿನ್ನೆ ದಿನ ಸೋಮವಾರಪೇಟೆಗೆ ವಾಪಸ್ ಆಗಿದ್ದಾರೆ. ಕರ್ತವ್ಯದಲ್ಲಿ ಒತ್ತಡ ಇದ್ದುದರಿಂದ ಊರು ಬಿಟ್ಟು ತೆರಳಿದ್ದಾಗಿ ಪೆÇಲೀಸ್ ವಿಚಾರಣೆ ವೇಳೆ ತಿಳಿಸಿದ್ದಾರೆ.