ಮಡಿಕೇರಿ, ಆ. 6: ಜಿಲ್ಲೆಯಲ್ಲಿ ಹೊಸದಾಗಿ 25 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇದುವರೆಗೆ 610 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 381 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 10 ಮಂದಿ ಸಾವನ್ನಪ್ಪಿದ್ದು, 219 ಪ್ರಕರಣಗಳು ಸಕ್ರಿಯವಾಗಿದೆ. ಜಿಲ್ಲೆಯಾದ್ಯಂತ 169 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ಕುಶಾಲನಗರದ ನೇತಾಜಿ ಬಡವಾಣೆಯ 19 ವರ್ಷದ ಪುರುಷ, ಪಿರಿಯಾಪಟ್ಟಣದ ಆವರ್ತಿಯ 43 ವರ್ಷದ ಪುರುಷ, ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ 46 ವರ್ಷದ ಪುರುಷ, ವೀರಾಜಪೇಟೆಯ ಮೊಗರ್ ಗಲ್ಲಿಯ 40 ವರ್ಷದ ಮಹಿಳೆ ಮತ್ತು 22 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕುಶಾಲನಗರದ ಮುಳ್ಳುಸೋಗೆಯ 34 ವರ್ಷದ ಪುರುಷ, ವೀರಾಜಪೇಟೆಯ 37ಮತ್ತು 45 ವರ್ಷದ ಮಹಿಳೆ, ಮಾದಾಪುರದ 48 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ವೀರಾಜಪೇಟೆಯ ಕುಟ್ಟದ ಪೂಜೆ ಕಲ್ಲುವಿನ 65 ವರ್ಷದ ಮಹಿಳೆ, ಸೋಮವಾರಪೇಟೆ ಚೌಡ್ಲುವಿನ 14 ವರ್ಷದ ಬಾಲಕ, ವೀರಾಜಪೇಟೆಯ ಕುಟ್ಟಂದಿಯ 48 ವರ್ಷದ ಪುರುಷ, ಸೋಮವಾರಪೇಟೆಯ ದೊಡ್ಡ ಹನಕೋಡುವಿನ 55 ವರ್ಷದ ಪುರುಷ, ಚೆಟ್ಟಳ್ಳಿ ಭೂತನಕಾಡುವಿನ 45 ವರ್ಷದ ಮಹಿಳೆ, ಸೋಮವಾರಪೇಟೆ ಒಂಟಿ ಅಂಗಡಿ ಅಭ್ಯತ್ ಮಂಗಲದ 25 ವರ್ಷದ ಮಹಿಳೆ, ಕುಶಾಲನಗರದ ತೊರೆನೂರುವಿನ 44 ವರ್ಷದ ಮಹಿಳೆ, ವೀರಾಜಪೇಟೆ ವಿಜಯನಗರದ 23 ವರ್ಷದ ಮಹಿಳೆ, ವೀರಾಜಪೇಟೆ ತೆಲುಗರ ಬೀದಿಯ 52 ವರ್ಷದ ಪುರುಷ, ವೀರಾಜಪೇಟೆಯ ಪೆರುಂಬಾಡಿಯ 55 ವರ್ಷದ ಪುರುಷ ಮತ್ತು 50 ವರ್ಷದ ಮಹಿಳೆ, ಕುಶಾಲನಗರದ ತೊರೆನೂರುವಿನ 50 ವರ್ಷದ ಪುರುಷ. ಗೋಣಿಕೊಪ್ಪಲುವಿನ ಅಚ್ಚಪ್ಪ ಲೇಔಟ್ ನ 37 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಗೌಳಿಬೀದಿಯ ಲೋಕಾಯುಕ್ತ ಕಟ್ಟಡದ 36 ವರ್ಷದ ಪುರುಷ, ಮಡಿಕೇರಿಯ ಪೆÇಲೀಸ್ ವಸತಿ ಗೃಹದ 47 ವರ್ಷದ ಪುರುಷ, ಮಡಿಕೇರಿಯ ಹೈವೇ ಹೊಟೇಲ್ ಹಿಂಭಾಗದ 25 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.