ಮಡಿಕೇರಿ, ಆ. 6: ಗೋಣಿಕೊಪ್ಪದ ಕೊರೊನಾ ದೃಢಪಟ್ಟ ಸೋಂಕಿತ ವ್ಯಕ್ತಿಯು ಅಚ್ಚಪ್ಪ ಬಡಾವಣೆ ಹಾಗೂ ಹರಿಶ್ಚಂದ್ರಪುರ ಎರಡು ಕಡೆಯೂ ಸಂಪರ್ಕವಿರಿಸಿಕೊಂಡ ಕಾರಣ ಈ ಎರಡು ಸ್ಥಳಗಳನ್ನು ಅಧಿಕಾರಿಗಳು ಇಂದು ಸೀಲ್‍ಡೌನ್ ಮಾಡಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖಾ ಅಧಿಕಾರಿಗಳಾದ ರಾಧಾಕೃಷ್ಣ, ಸುಚಿತ್ರ, ಮುಕುಂದ, ಪಂಚಾಯಿತಿ ಪಿ.ಡಿ.ಒ ಶ್ರೀನಿವಾಸ್, ಆರೋಗ್ಯ ಇಲಾಖೆಯ ಲತಾ, ಚಿತ್ರ ಹಾಗೂ ಪೆÇಲೀಸ್ ಇಲಾಖೆಯವರು, ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.