ಚೆಟ್ಟಳ್ಳಿ, ಆ. 6: ಸುಂಟಿಕೊಪ್ಪ ಹೋಬಳಿ ಅತ್ತೂರು ನಲ್ಲೂರು, ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂತನಕಾಡುವಿನಲ್ಲಿ, ಮೈಸೂರು ಜಿಲ್ಲೆಯ ಪ್ರಯಾಣದ ಇತಿಹಾಸವಿರುವ 45 ವರ್ಷದ ಮಹಿಳೆಯೊಬ್ಬರಿಗೆ ಗುರುವಾರ ದಿನ ಕೊರೊನಾ ಸೋಂಕು ಪತ್ತೆಯಾಗಿದೆ.
ಏಳು ಮನೆ ಹಾಗೂ 21 ಜನರಿರುವ ಪ್ರದೇಶವನ್ನು ನಿಯಂತ್ರಿತ ಪ್ರದೇಶವೆಂದು ಘೋಷಿಸಲಾಗಿದೆ.
ಈ ಸಂದರ್ಭ ಕಂದಾಯಾಧಿಕಾರಿ ಶಿವಪ್ಪ, ಗ್ರಾಮ ಲೆಕ್ಕಿಗೆ ನಸೀಮ, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಹಾಗೂ ಆರೋಗ್ಯ ಅಧಿಕಾರಿಗಳು ಇದ್ದರು.