ಮಡಿಕೇರಿ, ಆ. 5: ಜಿಲ್ಲೆಯಲ್ಲಿ ಹೊಸದಾಗಿ 25 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 585 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 369 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಒಟ್ಟು 10 ಮಂದಿ ಸಾವನ್ನಪ್ಪಿದ್ದು, 206 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ 157 ನಿಯಂತ್ರಿತ ವಲಯಗಳಿವೆ. ಹೊಸ ಪ್ರಕರಣಗಳ ವಿವರ

ಮಡಿಕೇರಿಯ ಆಜಾದ್ ನಗರದ 75 ಮತ್ತು 33 ವರ್ಷದ ಪುರುಷ, 27 ವರ್ಷದ ಮಹಿಳೆ, ವೀರಾಜಪೇಟೆಯ ಬೆಕ್ಕೆಸೊಡ್ಲೂರುವಿನ 45 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

(ಮೊದಲ ಪುಟದಿಂದ) ಕುಶಾಲನಗರದ ವಾಸವಿ ಮಹಲ್ ಬಳಿಯ 47 ವರ್ಷದ ಮಹಿಳೆ, ಕುಶಾಲನಗರದ ಎಚ್‍ಆರ್‍ಪಿ ಕಾಲೋನಿಯ 45 ವರ್ಷದ ಪುರುಷ, ಕುಶಾಲನಗರದ ಮುಳ್ಳುಸೋಗೆಯ ಕುವೆಂಪು ಬಡಾವಣೆಯ 80 ವರ್ಷದ ಪುರುಷ. ಸೋಮವಾರಪೇಟೆ ಗೌಡಹಳ್ಳಿಯ ದೊಡ್ಡಮಲ್ತೆಯ 23 ವರ್ಷದ ಪುರುಷ, ಸೋಮವಾರಪೇಟೆಯ ರೇಂಜರ್ ಬ್ಲಾಕಿನ 26 ಮತ್ತು 24 ವರ್ಷದ ಪುರುಷ. ಸೋಮವಾರಪೇಟೆಯ ಪೆÇಲೀಸ್ ವಸತಿ ಗೃಹದ 27 ವರ್ಷದ ಪುರುಷ, ಸೋಮವಾರಪೇಟೆಯ ಚೆಟ್ಟಳ್ಳಿ ಬಳಿಯ ಚೆಟ್ಟಳ್ಳಿ ಫಾರಂನ 24 ವರ್ಷದ ಮಹಿಳೆ, 2 ಮತ್ತು 3 ವರ್ಷದ ಬಾಲಕಿಯರು. ನೆಲ್ಯಹುದಿಕೇರಿಯ 28 ವರ್ಷದ ಪುರುಷ ಮತ್ತು 49 ವರ್ಷದ ಮಹಿಳೆ. ಸೋಮವಾರಪೇಟೆ ಶನಿವಾರಸಂತೆಯ ಹುಲುಸೆ ಮೂಡರಹಳ್ಳಿಯ 49 ವರ್ಷದ ಪುರುಷ.

ಸೋಮವಾರಪೇಟೆಯ ನಾರೂರು ಗ್ರಾಮದ 55 ವರ್ಷದ ಪುರುಷ. ಸೋಮವಾರಪೇಟೆ ತೊರೆನೂರುವಿನ 24 ವರ್ಷದ ಪುರುಷ.

ಕುಶಾಲನಗರ ಹೆಬ್ಬಾಲೆಯ ಬಾರ್ ರಸ್ತೆಯ 17 ವರ್ಷದ ಮಹಿಳೆ. ಮಡಿಕೇರಿಯ ಸಂಪಾಜೆಯಲ್ಲಿನ 41 ವರ್ಷದ ಪುರುಷ.

ಮಡಿಕೇರಿ ಮಹದೇವಪೇಟೆಯ 36 ವರ್ಷದ ಪುರುಷ. ಮಡಿಕೇರಿ ದಾಸವಾಳ ರಸ್ತೆಯ 51 ವರ್ಷದ ಮಹಿಳೆ. ಮಹದೇವಪೇಟೆಯ ಮಖಾನ್ ರಸ್ತೆಯ 48 ಮತ್ತು 21 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.