ಚೆಟ್ಟಳ್ಳಿ, ಆ. 4: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಗಳವಾರ ಒಂದೇ ದಿನ ನಾಲ್ಕು ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಸಂಬಂಧ ಪೆÇನ್ನತ್ಮೊಟ್ಟೆಯಲ್ಲಿ ಎರಡು ಕಂಟೈನ್ಮೆಂಟ್ ವಲಯಗಳನ್ನು ತೆರೆಯಲಾಗಿದೆ. ಚೆಟ್ಟಳ್ಳಿ ಮಸೀದಿ ರಸ್ತೆಯಲ್ಲಿ ನಿಯಂತ್ರಿತ ಪ್ರದೇಶವನ್ನು ತೆರೆಯಲಾಗಿದ್ದು, ಒಟ್ಟು ಏಳು ಮನೆಗಳಲ್ಲಿ 21 ಜನ ವಾಸಿಸುತ್ತಿದ್ದಾರೆ. ಕೂಡ್ಲೂರು ಚೆಟ್ಟಳ್ಳಿ ಕಂಟೈನ್ಮೆಂಟ್ ವಲಯದಲ್ಲಿ ಎರಡು ಮನೆಗಳು ಇದ್ದು, ಈ ಎರಡು ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದೆ.

ತಹಶೀಲ್ದಾರ್ ಗೋವಿಂದರಾಜು ನೇತೃತ್ವದಲ್ಲಿ ಸೀಲ್‍ಡೌನ್ ಮಾಡಲಾ ಗಿದ್ದು, ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್, ಚೆಟ್ಟಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಂದೀಶ್, ವಿ.ಎ. ನಸೀಮ, ಸುಶೀಲ, ಪೆÇಲೀಸ್ ಸಿಬ್ಬಂದಿಗಳು, ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.