ಗೋಣಿಕೊಪ್ಪ ವರದಿ, ಆ. 4 : ಕಾಕೂರು-ಕುಟ್ಟ ಸಂಪರ್ಕ ರಸ್ತೆಯ ಕಾಯಿಮಾನಿ ಸೇತುವೆ ಕಾಮಗಾರಿಯ ತಾತ್ಕಾಲಿಕ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗುವ ಆತಂಕ ಸೃಷ್ಟಿಸಿದೆ.

ಸೋಮವಾರ ರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನದವರೆಗೆ ಕುರ್ಚಿ, ಕಾಕೂರು ಭಾಗದಲ್ಲಿ ಹೆಚ್ಚು ಮಳೆ ಸುರಿದ ಕಾರಣ ನೀರು ಹೆಚ್ಚಾಗಿ ಹರಿಯುತ್ತಿದ್ದು, ವಾಹನ ಓಡಾಟಕ್ಕೆ ಬಿಟ್ಟಿರುವ ರಸ್ತೆ ಒಡೆದು ಹೋಗುವ ಸಾಧ್ಯತೆ ಹೆಚ್ಚಿದೆ. ರಸ್ತೆಯ ಮೇಲಿ ನವರೆಗೂ ನೀರು ಬಂದುನಿಂತಿದೆ. ವೇಗವಾಗಿ ನೀರು ಹರಿಯಲಾಗದೆ ಕಿತ್ತುಹೋಗುವ ಸಾಧ್ಯತೆ ಹೆಚ್ಚಿದ್ದು, ಸಂಪರ್ಕ ಕಡಿತಗೊಳ್ಳುವ ಬಗ್ಗೆ ಸ್ಥಳೀಯರು ಆತಂಕಗೊಂಡಿದ್ದಾರೆ.