ಚೆಟ್ಟಳ್ಳಿ, ಆ. 5: ಪವಿತ್ರ ಅರಫಾ ದಿನದಂದು ಅಯ್ಯಂಗೇರಿ ಮಸೀದಿ, ಸುತ್ತಮುತ್ತಲಿನ ಪರಿಸರ, ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತಹ ಗಿಡಗಂಟಿಗಳನ್ನು ಮತ್ತು ಚರಂಡಿಗಳನ್ನು ಎಸ್.ಕೆ.ಎಸ್. ಎಸ್.ಎಫ್. ಅಯ್ಯಂಗೇರಿ ಶಾಖೆ ವಿಖಾಯ ಕಾರ್ಯಕರ್ತರ ವತಿಯಿಂದ ಶುಚಿತ್ವಗೊಳಿಸಲಾಯಿತು.

ಈ ಸಂದರ್ಭ ಐಯ್ಯಂಗೇರಿ ಶಾಖೆಯ ವಿಖಾಯ ಉಸ್ತುವಾರಿ ಉವೈಸ್ ತಿಳಿಸಿದರು. ಶಾಖೆಯ ಅಧ್ಯಕ್ಷ ನಾಸರ್, ಕಾರ್ಯದರ್ಶಿ ಹಸನ್ ಬಡುವಂಡ, ಶಾಖೆಯ ವಿಖಾಯ ಕಾರ್ಯದರ್ಶಿ ರಶೀದ್ ಮತ್ತು ವಿಖಾಯ ಸದಸ್ಯರಾದ ರಂಶಿದ್, ಶಾಹಿದ್, ಅಬ್ದುಲ್ ರಹ್ಮಾನ್, ಕುನ್ಯಬ್ದುಲ್ಲಾ, ಯುನುಸ್, ಭಾದಿಷ, ಜಲೀಲ್, ಬಶೀರ್ ಮೊದಲಾದವರು ಹಾಜರಿದ್ದರು.