ಮಡಿಕೇರಿ, ಆ. 5: ಅಮ್ಮತಿ ಹೋಬಳಿ ಕರಡಿಗೋಡು ಗ್ರಾಮದಲ್ಲಿ ಕಾವೇರಿ ನದಿ ಪ್ರವಾಹದಿಂದ ನಿರಾಶ್ರಿತರಾದವರಿಗೆ ಸರ್ಕಾರಿ ಪ್ರಾಥಮಿಕ ಶಾಲೆ ಕರಡಿಗೋಡುವಿನಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಈ ಪರಿಹಾರ ಕೇಂದ್ರದಲ್ಲಿ 5 ಕುಟುಂಬದ 12 ಜನ ವಾಸ್ತವ್ಯ ಹೂಡಿದ್ದಾರೆ. ವೀರಾಜಪೇಟೆ ಪಟ್ಟಣದ ನೆಹರು ನಗರ ಮತ್ತು ಅಯ್ಯಪ್ಪ ಸ್ವಾಮಿ ಬೆಟ್ಟ ಬಡಾವಣೆಯ ಒಟ್ಟು 20 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಕ್ಕೆ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ನಂದೀಶ್ ಅವರು ತಿಳಿಸಿದ್ದಾರೆ.