ವೀರಾಜಪೇಟೆ, ಆ. 4: ಕೊರೊನಾ ಸೋಂಕು ವರದಿಯಲ್ಲಿ ಪಾಸಿಟಿವ್ ಬಂದ ನಂತರ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತರಿ ಗ್ರಾಮದ ಒಂದು ಭಾಗ ಸೀಲ್ಡೌನ್ ಆಗಿದ್ದು, ಪ್ರದೇಶದ ಕುಟುಂಬಗಳಿಗೆ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಸದಸ್ಯ ಮಂಡೇಟಿರ ಅನಿಲ್, ಗ್ರಾಮಸ್ಥರಾದ ಪೊಕ್ಕಳಚಂಡ ಚೇತನ್ ಹ್ಯಾರೀಸ್, ತೊರೇರ ಸುನಿ, ಮಂಡೇಟಿರ ಪೊನ್ನಣ್ಣ ಇತರರು ಸೇರಿ ಪಡಿತರ ಕಿಟ್ಗಳನ್ನು ವಿತರಿಸಿದರು.