ಚೆಟ್ಟಳ್ಳಿ, ಆ. 5: ಸಿದ್ದಾಪುರದ ಅಜ್ಮೀರ್ ವಾಟ್ಸಾಪ್ ಗ್ರೂಪ್ ವತಿಯಿಂದ ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡು ವೇತನವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಕೊಡಗು ಜಿಲ್ಲೆಯ ಬಡ ಮದ್ರಸಾ ಆಧ್ಯಾಪಕರಿಗೆ ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.

ಸದಸ್ಯರಿಂದ ಸಂಗ್ರಹಿಸಲಾದ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಅತೀ ಸಂಕಷ್ಟ್ಟದಲ್ಲಿರುವವರನ್ನು ಪತ್ತೆ ಹಚ್ಚಿ ಜಿಲ್ಲೆಯ 60 ಮದ್ರಸಾ ಅಧ್ಯಾಪಕರಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸಿಕೊಡಲಾಯಿತು. ಕೆಲಸ ಕಳೆದುಕೊಂಡ ಮದ್ರಸಾ ಅಧ್ಯಾಪಕರಿಗೆ, ವಕ್ಫ್ ಮಂಡಳಿ ಮುತವರ್ಜಿವಹಿಸಿ ತಾತ್ಕಾಲಿಕ ಪರಿಹಾರ ನೀಡಬೇಕೆಂದು ಅಜ್ಮೀರ್ ವಾಟ್ಸಾಪ್ ಗ್ರೂಪ್ ಸದಸ್ಯರುಗಳಾದ ರಯೀಸ್ ಸಿತಾರ, ಜಂಶೀರ್ ವಾಫಿ, ಮುಸ್ತಫಾ ಅಶ್ರಫಿ, ನಿಸಾಮುದ್ದೀನ್ ಸಿದ್ದಾಪುರ, ಸಾಜಿರ್ ಪೆÇನ್ನಂಪೇಟೆ, ಶಾಹಿಲ್ ಹೊಲಮಾಳ, ಶರ್ಫುದ್ದೀನ್ ನೆಲ್ಲಿಹುದಿಕೇರಿ, ತೌಫೀಖ್ ದಾರಿಮಿ, ರಫೀಖ್ ಬಾಖವಿ, ಉನೈಸ್ ಹುಂಡಿ ಒತ್ತಾಯಿಸಿದರು.