ಸುಂಟಿಕೊಪ್ಪ, ಆ. 4: ಪಟ್ಟಣದ ಹೃದಯಭಾಗದಲ್ಲಿರುವ ಜನತಾ ಕಾಲೋನಿಯಲ್ಲಿ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿ ಕಾಲೋನಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಈ ಭಾಗದ ಜನರಿಗೆ ಪಂಚಾಯಿತಿ ಮಾಜಿ ಸದಸ್ಯರುಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಹಾರ ಕಿಟ್ ವಿತರಿಸಿದರು.
ಗ್ರಾ.ಪಂ. 1ನೇ ವಿಭಾಗದ ಮಾಜಿ ಸದಸ್ಯರುಗಳಾದ ಜಿ.ಜಿ. ಹೇಮಂತ್ ಕುಮಾರ್, ಎ.ಶ್ರೀಧರ್ ಕುಮಾರ್, ಪಂಚಾಯಿತಿ ಪಿಡಿಓ ವೇಣುಗೋಪಾಲ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್.ರವಿ ಇವರುಗಳು ದಿನಸಿ ಹಾಗೂ ತರಕಾರಿ ಸಾಮಾಗ್ರಿಗಳ ಕಿಟ್‍ಗಳನ್ನು ವಿತರಿಸಿದರು.