ಶನಿವಾರಸಂತೆ, ಆ. 3: ಶನಿವಾರಸಂತೆಯಲ್ಲಿ ಮುಸ್ಲಿಂ ಬಾಂಧವರು ಸರಳ ಮತ್ತು ಸಜ್ಜನಿಕೆಯಂತೆ ಬಲಿ ದಾನಗಳ ಹಬ್ಬ ಬಕ್ರೀದ್ ಆಚರಿಸಿದರು. ಜಾಮೀಯ ಮಸೀದಿ ಮದ್ರಸ ಹಾಗೂ ಗುಂಡೂರಾವ್ ಬಡಾವಣೆಯ ಮರೀನಾ ಮಸೀದಿಯಲ್ಲಿ ಆಚರಣೆಗೆ ಅವಕಾಶ ಕಲ್ಪಿಸಲಾಗಿದ್ದು, ಸಂಪೂರ್ಣವಾಗಿ ಜಿಲ್ಲಾಡಳಿತದ ಸೂಚನೆಯಂತೆ ಹಬ್ಬವನ್ನು ಆಚರಿಸಿ ಪೊಲೀಸ್ ಇಲಾಖೆಯ ಮೆಚ್ಚುಗೆಗೆ ಸ್ಥಳೀಯರು ಪಾತ್ರರಾದರು.

ಜಾಮೀಯ ಮಸೀದಿಯ ಇಮಾಮ್ ತೌಸೀಫ್ ಜಾಕೀ ಹಾಗೂ ಈದ್ಗಾ ಮಸೀದಿಯ ಇಮಾಮ್ ಮುಫ್ತಿ ಅಬ್ದುಲ್ ಮೌಮೀನ್ ಕೆಲ್ಕಾತಾಪಿಯವರು ಪ್ರಾರ್ಥನೆಯನ್ನು ನೆರವೇರಿಸಿಕೊಟ್ಟರು.