ಪೆÇನ್ನಂಪೇಟೆ,ಆ.2: ಎ.ಕೆ. ಸುಬ್ಬಯ್ಯ ಪೆÇನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಕೆಪಿಸಿಸಿ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ಕಾಯ್ದೆ ಘಟಕದ ಅಧ್ಯಕ್ಷ ಎ.ಎಸ್. ಪೆÇನ್ನಣ್ಣ ಅವರು ನಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಡ್ಡರಮಾಡು ಹಾಡಿ ಪೈಸಾರಿಯ ನಿವಾಸಿಗಳಿಗೆ ದಿನಸಿ ಕಿಟ್‍ಗಳನ್ನು ವಿತರಿಸಿದರು.
ವಡ್ಡರಮಾಡು ಹಾಡಿಯ 5 ಜನರಿಗೆ ಕೋವಿಡ್-19 ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ನಿಬರ್ಂಧಿತ ವಲಯವನ್ನಾಗಿ ಮಾಡಲಾಗಿದೆ. ಈ ಕಾರಣದಿಂದ ಹೆಚ್ಚಾಗಿ ಕೂಲಿ ಕಾರ್ಮಿಕರಾಗಿರುವ ಇಲ್ಲಿನ ಹಾಡಿ ನಿವಾಸಿಗಳು ಆಹಾರ ಸಾಮಗ್ರಿಗಳಿಗೆ ತೊಂದರೆ ಅನುಭವಿಸುತ್ತಿದ್ದರು. ಈ ವಿಷಯವನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಪೆÇನ್ನಣ್ಣ ಅವರ ಗಮನಕ್ಕೆ ತಂದಾಗ ಕೂಡಲೇ ಸ್ಪಂದಿಸಿದ ಅವರು, ಹಾಡಿಯ ಪ್ರತಿ ಸದಸ್ಯರಿಗೂ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಬಿ.ಎನ್.ಪ್ರಥ್ಯು, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ಮೀದೇರೀರ ನವೀನ್, ಮಾಜಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಅಜ್ಜಿಕುಟ್ಟಿರ ಎಸ್. ನರೇನ್ ಕಾರ್ಯಪ್ಪ, ನಿಟ್ಟೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪೆÇೀರಂಗಡ ಪವನ್, ಕಡೇಮಾಡ ಕುಸುಮ ಜೋಯಪ್ಪ, ಕಾಂಗ್ರೆಸ್ ಪ್ರಮುಖರಾದ ಕೇಚಮಾಡ ಶಿವ ನಾಚಪ್ಪ, ಚೇರಂಡ ಮೋಹನ್ ಕುಶಾಲಪ್ಪ, ಚಂದುರ ರೋಹಿತ್ ಪೆÇನ್ನಪ್ಪ, ತೀತಿರ ಚೊಂದಮ್ಮ ಜಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.ಗೋಣಿಕೊಪ್ಪ ವರದಿ: ವೀರಾಜಪೇಟೆ ತಾಲೂಕು ಬಿಜೆಪಿ ವತಿಯಿಂದ ಟಿ. ಶೆಟ್ಟಿಗೇರಿ ಹಾಗೂ ನೆಮ್ಮಲೆ ಗ್ರಾಮದ ಇಬ್ಬರು ವೃದ್ಧೆಯರಿಗೆ ಆಹಾರ ಕಿಟ್ ವಿತರಿಸಲಾಯಿತು.
ಕಾರ್ಯಕರ್ತ ಮಾಣೀರ ಉಮೇಶ್, ತಾಲೂಕು ಸಾಮಾಜಿಕ ಜಾಲತಾಣದ ಮುಖಂಡ ಚೆಟ್ಟಂಗಡ ಮಹೇಶ್ ಮಂದಣ್ಣ ವಿತರಿಸಿದರು.ಅಮ್ಮತ್ತಿ: ಅಧ್ಯಾಪಕ ರಂಗವನ್ನೆ ಜೀವನ ಮಾರ್ಗವಾಗಿಸಿಕೊಂಡಿದ್ದ ಗುರುವೃಂದದವರು ಕೊರೊನಾ ನೆಪದಿಂದಾಗಿ ಮುಚ್ಚಿಹೋಗಿರುವ ಮದ್ರಸಾ ಶಿಕ್ಷಕ ವೃತ್ತಿಯನ್ನು ಕಳೆದುಕೊಂಡು ಜೀವನ ಸಾಗಿಸಲು ಕಷ್ಟ ಪಡುತ್ತಿರುವ ಜಿಲ್ಲೆಯ ಎಂಭತ್ತಕ್ಕೂ ಮಿಕ್ಕ ಧರ್ಮ ಗುರುಗಳಿಗೆ ಕಾರುಣ್ಯ ಸಹಾಯ ನಿಧಿಯ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು.
ಜಿಲ್ಲೆಯಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಕಾರುಣ್ಯ ಸಹಾಯ ನಿಧಿಯ ಈ ಕಾರ್ಯವು ಹಲವಾರು ಜ್ಞಾನ ದಾನಿಗಳ ಮನ ತುಂಬಿಸಿದೆ ಎಂದು ಕಾರುಣ್ಯ ಸಹಾಯ ನಿಧಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಚೋಕಂಡಳ್ಳಿ ಹೇಳಿದರು. ಈ ಸಂದರ್ಭ ಸಂಘದ ಅಧ್ಯಕ್ಷ ನಝೀರ್ ಚಾಮಿಯಾಲ, ಕೋಶಾಧಿಕಾರಿ ಶೇಕ್ ಅಬ್ದುಲ್ಲಾ ಹುಂಡಿ ಇದ್ದರು.