ಆಲೂರು-ಸಿದ್ದಾಪುರ, ಆ. 3: ಶಿಕ್ಷಣ ಇಲಾಖೆಯಲ್ಲಿ ಹೆಸರು ಮಾಡಿದ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಆಲೂರು-ಸಿದ್ದಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತರಾದ ರಾಮಚಂದ್ರ ಮೂರ್ತಿ ಅವರಿಗೆ ಬೀಳ್ಕೊಡಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್ ಮಾತನಾಡಿದರು. ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್, ವಾಲ್ನೂರು ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್, ಗುಡ್ಡೆಹೊಸೂರು ಶಾಲೆಯ ಮುಖ್ಯ ಶಿಕ್ಷಕ ಸಣ್ಣಸ್ವಾಮಿ. ಹೆಬ್ಬಾಲೆ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ್, ಬಿ.ಈ.ಓ. ಕಚೇರಿಯ ಪ್ರಾಥಮಿಕ ವಿಭಾಗದ ಶಿಕ್ಷಣ ಸಂಯೋಜಕ ಶಿವಲಿಂಗ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಟಿ.ಕೆ. ಬಸವರಾಜ್, ಚಿನ್ನಪ್ಪ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸುರೇಂದ್ರ, ಶಾಲಾ ಶಿಕ್ಷಕ ವರ್ಗದವ ರಾದ ಮಹೇಶ್, ರಾಜಶೇಖರ, ಕುಮಾರ, ಧರ್ಮಪ್ಪ, ಸಹ ಶಿಕ್ಷಕಿ ಎಸ್.ಕೆ. ರಾಧಾ, ಅಂಗನವಾಡಿ ಶಿಕ್ಷಕಿ, ಅಡುಗೆಯವರು ಭಾಗವಹಿಸಿದ್ದರು.