ಸುಂಟಿಕೊಪ್ಪ, ಆ. 3: ಸುಂಟಿಕೊಪ್ಪ ಶಿವರಾಮ ರೈ ಬಡಾವಣೆಯಲ್ಲಿ ಕೊರೊನಾದಿಂದ ಗುಣಮುಖ ಹೊಂದಿ ಹಿಂತಿರುಗಿದ್ದ ಬಾಲಕನಿಗೆ ಬಡಾವಣೆಯ ನಿವಾಸಿಗಳು ಹೂಗುಚ್ಚ ಸಿಹಿ ಹಂಚಿ ಸಂಭ್ರಮಿಸಿದರು.
ತಾ. 25 ರಂದು ಬಾಲಕನಿಗೆ ಕೊರೊನಾ ಸೋಂಕು ಪಾಸಿಟಿವ್ ಪತ್ತೆಯಾಗಿ ಕೂಡಿಗೆಯ ಕೋವಿಡ್ ಸೆಂಟರ್ನಲ್ಲಿ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಬಾಲಕನ್ನು ಗುಣಮುಖ ಹೊಂದಿದ್ದರಿಂದ ಮನೆಗೆ ಕಳುಹಿಸಲಾಗಿದೆ.