ಗೋಣಿಕೊಪ್ಪ ವರದಿ, ಆ. 3: ವಡ್ಡರಮಾಡು ಕಂಟೇನ್ಮೆಂಟ್ ಪ್ರದೇಶದಲ್ಲಿರುವವರಿಗೆ ಎ. ಕೆ. ಸುಬ್ಬಯ್ಯ, ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಅಗತ್ಯ ವಸ್ತುಗಳನ್ನು ಭಾನುವಾರ ವಿತರಿಸಲಾಯಿತು.

ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ಕಾಯ್ದೆ ಘಟಕ ಅಧ್ಯಕ್ಷ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಕಾಲನಿಯ ಪ್ರತಿ ಸದಸ್ಯರಿಗೂ ಒಂದು ತಿಂಗಳಿಗಾಗುವಷ್ಟು ಆಹಾರ ಧಾನ್ಯ ಕಿಟ್ ವಿತರಿಸಿದರು.

ಈ ಸಂದರ್ಭ ನಿಟ್ಟೂರು ಕಾಂಗ್ರೆಸ್ ವಲಯ ಅಧ್ಯಕ್ಷ ಪೆÇೀರಂಗಡ ಪವನ್, ಪಕ್ಷದ ಪ್ರಮುಖರಾದ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೇರೀರ ನವಿನ್, ಧರ್ಮಜ ಉತ್ತಪ್ಪ, ಕಡೇಮಾಡ ಕುಸುಮ ಜೋಯಪ್ಪ, ಕೇಚಮಡ ಶಿವು, ಚೇರಂಡ ಮೋಹನ್ ಕುಶಾಲಪ್ಪ, ಚಂದುರ ರೋಹಿತ್ ಪೆÇನ್ನಪ್ಪ ಇದ್ದರು.