ಭಾಗಮಂಡಲ, ಆ. 2: ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಲ್ಲಿ ಹತ್ತು ವರ್ಷಗಳಿಂದ ನೌಕರರಾಗಿ ನಂತರ ಕಾರ್ಯದರ್ಶಿಯಾಗಿ 26 ವರ್ಷಗಳ ಸೇವೆ ಸಲ್ಲಿಸಿದ ನಿಡ್ಯಮಲೆ ಅಶೋಕ್ ಅವರು ನಿವೃತ್ತಿ ಹೊಂದಿದ್ದು, ಸಂಘದ ವತಿಯಿಂದ ಅವರನ್ನು ಬೀಳ್ಕೊಡಲಾಯಿತು. ಸಂಘದ ಅಧ್ಯಕ್ಷ ಹೊಸೂರು ಸತೀಶ್‍ಕುಮಾರ್ ಸನ್ಮಾನಿಸಿ, ಗೌರವಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ವಿಠಲ, ಪ್ರಭಾರ ಕಾರ್ಯದರ್ಶಿ ಸುಧಾ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.