ಸೋಮವಾರಪೇಟೆ,ಆ.2: ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಪಕ್ಕದ ಬೇಳೂರಿನ ವಿಸ್ತಾರವಾದ ಬಾಣೆ ಪ್ರದೇಶ ಇದೀಗ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಬೇಸಿಗೆಯಲ್ಲಿ ಒಣಗಿ ಕೆಂಬಣ್ಣಕ್ಕೆ ತಿರುಗಿದ್ದ ಹುಲ್ಲು ಗರಿಕೆಗಳು ಮಳೆಯ ಸಿಂಚನಕ್ಕೆ ಜೀವಕಳೆಯನ್ನು ಪಡೆದುಕೊಂಡಿದ್ದು ಹಸಿರಿನ ಹಾಸಿಗೆಯಂತೆ ಕಂಗೊಳಿಸುತ್ತಿದೆ. ಸುಮಾರು 58 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿರುವ ಬೇಳೂರು ಬಾಣೆಗೆ ಇತ್ತೀಚೆಗೆ ಪ್ರವಾಸಿಗರು ಅಧಿಕ ಸಂಖ್ಯೆಗಳಲ್ಲಿ ಆಗಮಿಸುತ್ತಿದ್ದು, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ. ಸೋಮವಾರಪೇಟೆ ಸೋಮವಾರಪೇಟೆ,ಆ.2: ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಪಕ್ಕದ ಬೇಳೂರಿನ ವಿಸ್ತಾರವಾದ ಬಾಣೆ ಪ್ರದೇಶ ಇದೀಗ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಬೇಸಿಗೆಯಲ್ಲಿ ಒಣಗಿ ಕೆಂಬಣ್ಣಕ್ಕೆ ತಿರುಗಿದ್ದ ಹುಲ್ಲು ಗರಿಕೆಗಳು ಮಳೆಯ ಸಿಂಚನಕ್ಕೆ ಜೀವಕಳೆಯನ್ನು ಪಡೆದುಕೊಂಡಿದ್ದು ಹಸಿರಿನ ಹಾಸಿಗೆಯಂತೆ ಕಂಗೊಳಿಸುತ್ತಿದೆ.
ಸುಮಾರು 58 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿರುವ ಬೇಳೂರು ಬಾಣೆಗೆ ಇತ್ತೀಚೆಗೆ ಪ್ರವಾಸಿಗರು ಅಧಿಕ ಸಂಖ್ಯೆಗಳಲ್ಲಿ ಆಗಮಿಸುತ್ತಿದ್ದು, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ. ಸೋಮವಾರಪೇಟೆ (ಮೊದಲ ಪುಟದಿಂದ) ವಾಹನಗಳು ಒಳಗೆ ಪ್ರವೇಶಿಸದಂತೆ ಬಾಣೆಯ ಸುತ್ತಲೂ ಚರಂಡಿ ನಿರ್ಮಿಸಿದ್ದು, ಕೆಲ ದ್ವಿಚಕ್ರ ವಾಹನ ಸವಾರರು ಚರಂಡಿಯನ್ನೂ ಮೀರಿ ಬೈಕ್‍ಗಳನ್ನು ಬಾಣೆಯ ಒಳಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಜಾನುವಾರುಗಳಿಗೆ ಮೇವು ಒದಗಿಸುವಲ್ಲೂ ಈ ಬಾಣೆ ಪ್ರಮುಖ ಪಾತ್ರ ವಹಿಸಿದೆ. ಸುತ್ತಮುತ್ತಲಿನ ಕೃಷಿಕರು ತಮ್ಮ ಜಾನುವಾರುಗಳನ್ನು ಈ ಬಾಣೆಯಲ್ಲಿ ಮೇಯಲು ಬಿಡುತ್ತಾರೆ. ಗಾಲ್ಫ್ ಮೈದಾನವಾಗಿರುವ ಹಿನ್ನೆಲೆ ಬೇಳೂರು ಗಾಲ್ಫ್ ಕ್ಲಬ್‍ನಿಂದ ಹಲವಷ್ಟು ಪಂದ್ಯಾಟಗಳೂ ಈ ಮೈದಾನದಲ್ಲಿ ನಡೆದಿವೆ.
ವಿಸ್ತಾರವಾದ ಬಾಣೆಯ ನಡುವೆ ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿ ಹಾದುಹೋಗಿದ್ದು, ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸಂಜೆ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಪ್ರಕೃತಿ ಪ್ರಿಯರು ಇಲ್ಲಿಗೆ ಭೇಟಿ ನೀಡುತ್ತಿದ್ದು, ತಂಪಾದ ಗಾಳಿಯೊಂದಿಗೆ ವಿಶಾಲವಾದ ಮೈದಾನದಲ್ಲಿ ಕೆಲಹೊತ್ತು ಕಾಲ ಕಳೆದು ಹಿಂತಿರುಗುತ್ತಿದ್ದಾರೆ. ಮಳೆಗಾಲವಾದ್ದರಿಂದ ಬೇಳೂರು ಬಾಣೆ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದು, ಪ್ರಕೃತಿ ಪ್ರಿಯರನ್ನು ಸೆಳೆಯುತ್ತಿದೆ.
- ವಿಜಯ್ ಹಾನಗಲ್