ಮಡಿಕೇರಿ, ಆ. 2: ಜಿಲ್ಲೆಯಲ್ಲಿ ತಾ.2 ರಂದು 12 ಹೊಸ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 472 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 322 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಒಟ್ಟು 9 ಮಂದಿ ಸಾವನ್ನಪ್ಪಿದ್ದು, 141 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ ಒಟ್ಟು 110 ನಿಯಂತ್ರಿತ ವಲಯಗಳಿವೆ.ಹೊಸ ಪ್ರಕರಣಗಳ ವಿವರ
ಮಡಿಕೇರಿಯ ರಾಣಿಪೇಟೆಯ ಹೇಮರಾಜ್ ಕಾಂಪೌಂಡಿನ 36 ವರ್ಷದ ಮಹಿಳೆ, 16 ಮತ್ತು 11 ವರ್ಷದ ಬಾಲಕಿ, ಮೈತ್ರಿ ಹಾಲ್ ಸಮೀಪದ ಪೆÇಲೀಸ್ ವಸತಿ ಗೃಹದ 38 ವರ್ಷದ ಪುರುಷ ಪೆÇಲೀಸ್ಸಿ ಬ್ಬಂದಿ, ಕೂಡುರಸ್ತೆಯ 54 ವರ್ಷದ ಪುರುಷ, ಸುಂಟಿಕೊಪ್ಪದ ಕಾನ್‍ಬೈಲಿನ 15 ವರ್ಷದ ಬಾಲಕಿ, ಕುಶಾಲನಗರದ ಹುಲುಸೆಯ 45 ವರ್ಷದ ಪುರುಷ, ಗೋಣಿಕೊಪ್ಪದ ಈರಣ್ಣ ಕಾಲೋನಿಯ 45 ವರ್ಷದ ಮಹಿಳೆ, ಮಡಿಕೇರಿಯ ಎಲ್.ಐ.ಸಿ ವಸತಿ ಗೃಹದ 22 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಮೈಸೂರು ಪ್ರಯಾಣದ ಇತಿಹಾಸ ಹೊಂದಿರುವ ನೆಲ್ಲಿಹುದಿಕೇರಿಯ ಎಂ.ಜಿ ಕಾಲೋನಿಯ 31 ವರ್ಷದ ಪುರುಷ, ಮಡಿಕೇರಿ ಮುತ್ತಪ್ಪ ದೇವಾಲಯ ಸಮೀಪದ 63 ವರ್ಷದ ಪುರುಷ, ಕೂಡುರಸ್ತೆಯ 35 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಹೊಸ ನಿಯಂತ್ರಿತ ಪ್ರದೇಶಗಳು
ಗೋಣಿಕೊಪ್ಪದ ಈರಣ್ಣ ಕಾಲೋನಿ, ಮಡಿಕೇರಿ ಎಲ್.ಐ.ಸಿ ಕ್ವಾರ್ಟರ್ಸ್, ನೆಲ್ಲಿಹುದಿಕೇರಿಯ ಎಂ.ಜಿ. ಕಾಲೋನಿ ಹಾಗೂ ಮಡಿಕೇರಿ ಮುತ್ತಪ್ಪ ದೇವಾಲಯದ ಬಳಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ.
ನಿಯಂತ್ರಿತ ಪ್ರದೇಶಗಳ ತೆರವು
ಅವಂದೂರು, ದೇಚೂರು, ಗೋಣಿಕೊಪ್ಪದ 2ನೇ ಬ್ಲಾಕ್‍ನಲ್ಲಿನ ನಿಯಂತ್ರಿತ ಪ್ರದೇಶಗಳನ್ನು ತೆರೆದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.