ಕಣಿವೆ, ಆ. 2 : ಯಥೇಚ್ಛವಾಗಿ ತಂಬಾಕು ಬೆಳೆಯುವ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬಹುತೇಕ ಗ್ರಾಮಗಳಿಗೆ ಕೊಡಗು ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಕಡಿದುರುಳಿಸುವ ಮರದ ನಾಟಾಗಳನ್ನು ಸರಬರಾಜು ಮಾಡಲಾಗುತ್ತದೆ. ಉತ್ತರ ಕೊಡಗಿನ ಶನಿವಾರಸಂತೆ ಬಳಿಯ ಬೆಸೂರು, ದಕ್ಷಿಣ ಕೊಡಗಿನ ಆನೆಚೌಕೂರು ಹಾಗೂ ಕುಶಾಲನಗರದ ಅರಣ್ಯ ತಪಾಸಣಾ ಗೇಟ್‍ಗಳ ಮೂಲಕ ದಿನವೊಂದಕ್ಕೆ 150 ರಿಂದ 200 ಲೋಡ್‍ಗಳಷ್ಟು ಮರಗಳ ನಾಟಾವನ್ನು ತಂಬಾಕು ಬೇಯಿಸುವ ಉದ್ದೇಶಕ್ಕೆ ಎಗ್ಗಿಲ್ಲದೇ ಕೊಂಡೊಯ್ಯ ಲಾಗುತ್ತದೆ. ಈ ಮರಗಳ ನಾಟಾಗಳನ್ನು ತುಂಡರಿಸಿ ಲಾರಿಗಳಲ್ಲಿ ಅಂದ ಚೆಂದವಾಗಿ ಜೋಡಿಸಿ ಸಾಗಿಸಲೆಂದೇ ಒಂದು ಟಿಂಬರ್ ದಲ್ಲಾಳಿ ಮಾಫಿಯಾ ನಿತ್ಯವೂ ಕಾರ್ಯಾಚರಣೆ ನಡೆಸುತ್ತಿದೆ.
ಉದ್ದೇಶಕ್ಕೆ ಎಗ್ಗಿಲ್ಲದೇ ಕೊಂಡೊಯ್ಯ ಲಾಗುತ್ತದೆ. ಈ ಮರಗಳ ನಾಟಾಗಳನ್ನು ತುಂಡರಿಸಿ ಲಾರಿಗಳಲ್ಲಿ ಅಂದ ಚೆಂದವಾಗಿ ಜೋಡಿಸಿ ಸಾಗಿಸಲೆಂದೇ ಒಂದು ಟಿಂಬರ್ ದಲ್ಲಾಳಿ ಮಾಫಿಯಾ ನಿತ್ಯವೂ ಕಾರ್ಯಾಚರಣೆ ನಡೆಸುತ್ತಿದೆ.ಮೊದಲಾದ ವಾಹನಗಳಲ್ಲಿ ಸಾಗಿಸಲಾಗುತ್ತದೆ. ಹಾಗಂತ ಆಗಷ್ಟೇ ಕಡಿದ ಮರಗಳ ನಾಟಾಗಳನ್ನು ಸಾಗಾಟ ಮಾಡಲ್ಲ. ಮುಂಗಡವಾಗಿ ಅಂದರೆ ಬೇಸಿಗೆಯಲ್ಲಿ ಮರಗಳನ್ನು ಕಡಿದುರುಳಿಸಿ ತುಂಡರಿಸಿದ ದಾಸ್ತಾನುಗಳು ಅರೆ ಬರೆ ಒಣಗಿದ ಬಳಿಕ ಅವುಗಳನ್ನು ಲೋಡ್ ಮಾಡಿ ಮಳೆಗಾಲದಲ್ಲಿ ಬೇಯಿಸುವ ತಂಬಾಕು ಬೆಳೆಗೆ ಸಾಗಿಸಲಾಗುತ್ತದೆ. ದಿನವೊಂದಕ್ಕೆ ಕೊಡಗಿನ ಎಲ್ಲಾ ಗಡಿಗಳಿಂದ ಕನಿಷ್ಟ ಒಂದು ನೂರ ಐವತ್ತರಂತೆ ತಿಂಗಳಿಗೆ 4500 ಲೋಡ್, ವಾರ್ಷಿಕ 48 ಸಾವಿರದಿಂದ
(ಮೊದಲ ಪುಟದಿಂದ) 50 ಸಾವಿರ ಲೋಡ್ ಗಳಷ್ಟು ಮರಗಳ ನಾಟಾ ಸಾಗಾಟವಾದರೆ ಕೊಡಗಿನ ಸುಂದರವಾದ ಹಚ್ಚ ಹಸಿರಿನ ಪರಿಸರ ಬರಿದಾಗದೇ ಇರುವುದೇ ಎಂಬುದಿಲ್ಲಿ ಯಕ್ಷ ಪ್ರಶ್ನೆ.
ಮಾರಕ ಕೊರೊನಾದಿಂದಾಗಿ ಅರ್ಥಿಕವಾಗಿ ನಷ್ಟಕ್ಕೆ ತುತ್ತಾಗಿರುವ ಬಹಳಷ್ಟು ಮಂದಿ ಜೀವನೋಪಾಯ ಕ್ಕಾಗಿ ಬೇರೆ ದಾರಿ ಕಾಣದೇ ತಾವು ತಮ್ಮ ಜಮೀನಿನಲ್ಲಿ ಬೆಳೆಸಿದ್ದ ಮರಗಳನ್ನು ಅರಣ್ಯ ಇಲಾಖೆಯ ಜೊತೆ ಒಳ ನಂಟು ಹೊಂದಿರುವ ಕೆಲವು ಮದ್ಯವರ್ತಿಗಳ ಮೂಲಕ ಮಾರಾಟ ಮಾಡುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ. ಇದೇ ರೀತಿ ಈ ಹಿಂದೆ ಹೆದ್ದಾರಿ ಅಭಿವೃದ್ದಿಗೆಂದು, ವಿದ್ಯುತ್ ಮಾರ್ಗ ನಿರ್ಮಾಣಕ್ಕೆಂದು ಕೊಡಗಿನಲ್ಲಿ ಬಹಳಷ್ಟು ಮರಗಳನ್ನು ಕಡಿದುರುಳಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ದೇಶಾದ್ಯಂತ ಹೆದ್ದಾರಿ, ರೈಲು ಮಾರ್ಗ, ವಿದ್ಯುತ್ ಮಾರ್ಗ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಕಾರಣವೊಡ್ಡಿ 1.09,75,844 ಸಂಖ್ಯೆಯ ಮರಗಳನ್ನು ಕಡಿದುರುಳಿಸಲಾಗಿದೆ. ಮತ್ತು ಇದಕ್ಕೆ ಪರಿಹಾರ 12 ಕೋಟಿ 60 ಲಕ್ಷ ಗಿಡಗಳನ್ನು ನೆಡಲಾಗಿದೆ ಎಂದು ಕೇಂದ್ರ ಪರಿಸರ ಇಲಾಖೆ ಹೇಳಿದೆ.
ಹೀಗೆ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಮರಗಳನ್ನು ಕಡಿಯುತ್ತಾ ಹೋದರೆ ಮುಂದೆ ಏನಾಗಬಹುದು ಎಂಬ ಕಳವಳವನ್ನು ಕೇಂದ್ರ ಪರಿಸರ ಇಲಾಖೆ ವ್ಯಕ್ತಪಡಿಸಿದೆ. ಕಳೆದ ಅಕ್ಟೋಬರ್ ನಲ್ಲಿ ಪ್ರಕಟವಾದ ಕೇಂದ್ರದ ವರದಿಯೊಂದು ಹೇಳುವಂತೆ ಈ ರೀತಿಯ ವೃಕ್ಷ ನಾಶ ಅಂತಿಮ ವಾಗಿ ವಿಶ್ವದ ಜೀವ ವೈವಿಧ್ಯವನ್ನೇ ನಾಶ ಮಾಡಿಬಿಡಬಹುದು. ಈಗಾಗಲೇ ಭೂಮಿಗೆ ಇಷ್ಟೊಂದು ಹಾನಿಯಾಗಿದೆ ಎಂದರೆ ಭೂಮಿಯ ಮೇಲಿನ ಸಹಸ್ರ ಜೀವ ರಾಶಿಗಳನ್ನು ಉಳಿಸಿಕೊಳ್ಳಬೇಕಾದರೆ ವಾರ್ಷಿಕ ನೂರು ಬಿಲಿಯನ್ ಡಾಲರ್ ಬೇಕಾಗಬಹುದು ಎಂದಿದೆ. ಗಿಡಮರಗಳನ್ನು ನೆಟ್ಟು ಬೆಳೆಸುವ ಹೊಣೆಗಾರಿಕೆಯನ್ನು ಈ ನೆಲದಲ್ಲಿ ವಾಸಿಸುವ ಪ್ರತೀ ಪ್ರಜೆಯು ಅದನ್ನು ಸವಾಲಾಗಿ ಸ್ವೀಕರಿಸದ ಹೊರತು ಜೀವ ವೈವಿಧ್ಯವನ್ನು ಸಂರಕ್ಷಿಸುವುದು ಅಸಾಧ್ಯವಾದ ಸಂಗತಿಯಾಗಬಹುದು. ಇನ್ನು ಕೆಲವು ಸಂಘಟನೆಗಳಿಗೆ ‘ಪರಿಸರ ಸಂರಕ್ಷಣೆ’ ಎಂಬುದು ಮಾಧ್ಯಮಗಳಲ್ಲಿ ಪ್ರಚಾರ ಪಡೆದು ತಮ್ಮ ಪ್ರತಿಷ್ಠೆ ಬೆಳೆಸಿಕೊಳ್ಳಲು ನೆರವಾಗುವ ಒಂದು ಸಲಕರಣೆಯಷ್ಟೇ ಆಗಿಬಿಟ್ಟಿದೆ. ತಂಬಾಕಿಗೆ ಪರ್ಯಾಯ : ಭವಿಷ್ಯದಲ್ಲಿ ತಂಬಾಕು ಬೆಳೆ ರೈತರಿಗೆ ಆರ್ಥಿಕವಾಗಿ ಪರ್ಯಾಯ ವಾಣಿಜ್ಯ ಬೆಳೆಯನ್ನು ಪರಿಚಯಿಸುವತ್ತ ಇಲಾಖೆಗಳು ಕಾರ್ಯಸನ್ನದ್ಧರಾಗಬೇಕಿದೆ. ಸುಂದರ ಪರಿಸರದಲ್ಲಿನ ಗಿಡಮರಗಳನ್ನು ನಾಶ ಮಾಡುವ ಮತ್ತು ಮಾರಣಾಂತಿಕ ಕ್ಯಾನ್ಸರ್ ರೋಗವನ್ನು ಮನುಷ್ಯನಿಗೆ ಎಡೆಮಾಡುವ ತಂಬಾಕು ಬೆಳೆ ಹಾಗೂ ತಂಬಾಕು ಉತ್ಪನ್ನಗಳನ್ನು ನಿಷೇಧಿಸು ವತ್ತ ಸರ್ಕಾರಗಳು ಚಿಂತನೆ ನಡೆಸಬೇಕಿದೆ.
ಸಿಂಗಲ್ ಬ್ಯಾರಲ್ ಒಂದರ ಹೊಗೆ ಸೊಪ್ಪು ಬೇಯಿಸುವ ಮನೆಯಲ್ಲಿ ಒಂದು ಅವಧಿಗೆ 350 ಕಡ್ಡಿಗಳನ್ನು ಬೇಯಿಸಲಾಗುತ್ತದೆ. ಒಂದು ಅವಧಿಯ ಹೊಗೆ ಸೊಪ್ಪು ಬೇಯಿಸಲು ಒಂದೂವರೆ ಟನ್ ಸೌದೆಬೇಕು. ಟನ್ ಒಂದರ ಸೌಧೆಗೆ 3500 ರೂ ತಗಲುತ್ತದೆ. 20 ಟನ್ ತೂಕವುಳ್ಳ ಲಾರಿಯೊಂದರ ಮರಗಳ ನಾಟಾಕ್ಕೆ 65 ರಿಂದ 70 ಸಾವಿರ ರೂ ತಗಲುತ್ತದೆ. ಸಿಂಗಲ್ ಬ್ಯಾರಲ್ ಹೊಗೆಸೊಪ್ಪು ಬೇಯಿಸುವ ಮನೆಯೊಂದರಲ್ಲಿ ವಾರ್ಷಿಕವಾಗಿ ಸೊಪ್ಪು ಬೇಯಿಸಲು ಒಟ್ಟು ಒಂದೂವರೆ ಲಕ್ಷ ರೂ. ವೆಚ್ಚ ತಗಲುತ್ತದೆ. ಬೆಳೆ ಚೆನ್ನಾಗಿ ಬಂದು ಬೇಯಿಸಿದ ಸೊಪ್ಪು ಗುಣಮಟ್ಟದಿಂದ ಕೂಡಿದ್ದು ಎರಡು ಸಾವಿರ ಕೆಜಿ ತೂಕ ಇದ್ದರೆ ಮೂರುವರೆ ಲಕ್ಷ ಆದಾಯ ಬರುತ್ತದೆ ಎನ್ನುತ್ತಾರೆ ಹೊಗೆಸೊಪ್ಪು ಕೃಷಿಕ ಗೊರಹಳ್ಳಿ ಗ್ರಾಮದ ಸಂತೋಷ್. ಕಳೆದ ವರ್ಷಕ್ಕಿಂತ ಈ ವರ್ಷ ಕೊರೊನಾ ಕಾರಣದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ತಗ್ಗುವ ಕಾರಣದಿಂದ ಮಾರುಕಟ್ಟೆ ಯಲ್ಲಿ 250 ಕ್ವಿಂಟಾಲ್ ಸೊಪ್ಪು ಕಡಿತಗೊಳಿಸಿದ್ದಾರೆ ಎನ್ನುತ್ತಾರೆ.
-ಮೂರ್ತಿ