ಸಿದ್ದಾಪುರ, ಜು. 31: ರಾಜ್ಯ ಸರ್ಕಾರವು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿ ಎದುರು ಸಿಐಟಿಯು ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಸಿಪಿಐಎಂ ಪಕ್ಷದ ಮುಖಂಡ ಡಾ. ದುರ್ಗಾ ಪ್ರಸಾದ್ ಸರಕಾರಗಳು ಕಾರ್ಮಿಕರ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಲಾಕ್‍ಡೌನ್ ಮಾಡಿದ ಹಿನ್ನೆಲೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇಂತಹ ಸಂದರ್ಭ ಈ ರೀತಿ ಕಾನೂನು ತಿದ್ದುಪಡಿ ಮಾಡಿರುವ ಸರ್ಕಾರದ ಕ್ರಮ ಸಮಂಜಸವಲ್ಲವೆಂದು ದೂರಿದರು. ಪ್ರತಿಭಟನೆಯಲ್ಲಿ ಸಿಐಟಿಯು ಸಂಘಟನೆಯ ಪ್ರಮುಖರಾದ ಹೆಚ್.ಬಿ. ರಮೇಶ, ವೈಜು ಮುಸ್ತಫ, ಕುಟ್ಟಪ್ಪ ಇನ್ನಿತರರಿದ್ದರು.