ಮಡಿಕೇರಿ, ಜು. 31: ಕೊರೊನಾ ನಡುವೆಯೇ ಸಮಾಜದ ಸಂಪ್ರದಾಯಗಳು - ಆಚರಣೆಗಳು - ಹಬ್ಬ ಹರಿದಿನಗಳು ಆತಂಕದ ಬದುಕಿಗೆ ಸಾಂತ್ವನ ಹೇಳುತ್ತಿವೆ. ಭರವಸೆ ಮೂಡಿಸುತ್ತಿವೆ. ತಾ. 31ರಂದು ಹಾರಂಗಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರಿಂದ ಬಾಗಿನ ಸಮರ್ಪಣೆಯ 24 ವರ್ಷಗಳ ಸಂಪ್ರದಾಯ ಮುಂದುವರೆದರೆ ಜಿಲ್ಲೆಯಲ್ಲಿ ಮುಸ್ಲಿಮರು ಬಕ್ರೀದ್ ಹಾಗೂ ಹಿಂದೂಗಳು ವರಮಹಾಲಕ್ಷ್ಮಿ ಹಬ್ಬವನ್ನು ಸರಳವಾಗಿ, ಭಕ್ತಿಪೂರ್ವಕವಾಗಿ ಆಚರಿಸಿದರು.