ಮಡಿಕೇರಿ, ಜು. 31: ಕೋವಿಡ್-19 ಅನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ರಚಿಸಲ್ಪಟ್ಟ ‘ಆರೋಗ್ಯ ಹಸ್ತ’ ಕಾರ್ಯಕ್ರಮದ ಅಧ್ಯಕ್ಷ ಮಾಜಿ ಸಂಸದ ಧ್ರುವನಾರಾಯಣ್ ಮತ್ತು ಸಂಚಾಲಕ ರಮಾನಾಥ್ ರೈ ಅವರುಗಳು ತಾ. 1ರಂದು (ಇಂದು) ಮಡಿಕೇರಿಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಮಧ್ಯಾಹ್ನ 12.15 ಗಂಟೆಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.