ಹಾರಂಗಿ, ಜು. 31: ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಜಲಾಶಯ ಪೂರ್ಣವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಶುಕ್ರವಾರ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.ಇದಕ್ಕೂ ಮೊದಲು ಶಾಸಕರೂ ಸೇರಿದಂತೆ ಇಲಾಖೆಯ ಅಧಿಕಾರಿಗಳು ಮತ್ತು ಬಿ.ಜೆ.ಪಿ ಪಕ್ಷದ ವಿವಿಧ ಸಂಘಟನೆಯ ಜನಪ್ರತಿನಿಧಿ ಗಳನ್ನೂ ಒಳಗೊಂಡಂತೆ ಅಣೆಕಟ್ಟೆಯ ಮುಂಭಾಗದಲ್ಲಿರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ನಂತರ ಅಲ್ಲಿಂದ ಭರ್ತಿಯಾದ ಅಣೆಕಟ್ಟೆಯ ಮೇಲ್ಬಾಗಕ್ಕೆ ತೆರಳಿ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದರು. ಬಳಿಕ ಮಾತನಾಡಿ ಈಗಾಗಲೇ ಅಣೆಕಟ್ಟೆಯು ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದ ನೀರಿನ ಮಟ್ಟವನ್ನು

(ಮೊದಲ ಪುಟದಿಂದ) ಕಾಯ್ದಿರಿಸಿಕೊಂಡು ನದಿಗೆ ಮತ್ತು ನಾಲೆಗೆ ಇಂದಿನಿಂದ ನೀರು ಹರಿಸಲಾಗುತ್ತಿದೆ. ಅಲ್ಲದೆ, ಮಳೆಯ ಪ್ರಮಾಣಕ್ಕೆ ಅನುಗುಣವಾಗಿ, ಒಳಹರಿವಿನ ಅಂಕಿ ಅಂಶಗಳನ್ನು ಆಧರಿಸಿ ಅಣೆಕಟ್ಟೆಯ ಮುಂಭಾಗದ ಯಾವುದೇ ಗ್ರಾಮಗಳಿಗೆ ಹಾನಿಯಾಗ ದಂತೆ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳ ಲಾಗಿದೆ. ಇಲಾಖೆಯ ಅಧಿಕಾರಿ ಗಳೊಂದಿಗೆ ಪ್ರತಿದಿನವೂ ಮಾಹಿತಿ ಯನ್ನು ಪಡೆದು ಇದರ ನಿರ್ವಹಣೆ ಯನ್ನು ಕ್ರಮಬದ್ಧವಾಗಿ ನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದರು.

ಹೂಳೆತ್ತುವಿಕೆ ಮುಂದುವರಿಯಲಿದೆ

ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿಯಲ್ಲಿ ಹೂಳೆತ್ತುವ ಕಾರ್ಯ ಈ ಬಾರಿ ರೂ. 88 ಲಕ್ಷ ವೆಚ್ಚದಲ್ಲಿ ನಡೆದಿದ್ದು, ಉಳಿದ ಕಾಮಗಾರಿಯು ಮಳೆಗಾಲದ ನಂತರ ಪುನರಾರಂಭಗೊಳ್ಳಲಿದೆ ಎಂದು ಶಾಸಕರು ಮಾಹಿತಿಯಿತ್ತರು. ಯಾವುದೇ ತೊಂದರೆಗಳಿಲ್ಲದೆ ಈ ಬಾರಿಯ ಮಳೆಗಾಲ ಪೂರ್ಣಗೊಳ್ಳಲಿ ಎಂದು ಆಶಿಸಿದ ರಂಜನ್, ರೈತಾಪಿ ವರ್ಗಕ್ಕೆ ಉತ್ತಮ ಬೆಳೆ ಬರುವ ಮೂಲಕ ಜೀವನ ಹಸನಾಗಲಿ ಎಂದು ಶುಭ ಕೋರಿದರು. ಹಾರಂಗಿ ಅಣೆಕಟ್ಟೆ ವಿಭಾಗದ ಕಛೇರಿಗಳನ್ನು ಕುಶಾಲನಗರದಿಂದ ಅಣೆಕಟ್ಟೆ ಆವರಣದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸುವ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದರು.

ತಾನು ಸಚಿವಾಕಾಂಕ್ಷಿ

ತಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು ತನ್ನ ಅನುಭವದ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಅಪ್ಪಚ್ಚುರಂಜನ್, ಇತರರಂತೆ ತಾನು ಮೇಲೆ ಬಿದ್ದು ಸ್ಥಾನ ಪಡೆಯುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ಸಂದರ್ಭ ಜಿಲ್ಲಾ ಪಂಚಾಯತಿ ಸದಸ್ಯರುಗಳಾದ. ಶ್ರೀನಿವಾಸ್, ಕೆ.ಆರ್. ಮಂಜುಳ, ತಾಲೂಕು ಪಂಚಾಯತಿ ಸದಸ್ಯರಾದ. ಗಣೇಶ್ ತಾಲೂಕು ಬಿ ಜೆ ಪಿ ಅದ್ಯಕ್ಷ ಮನುರೈ, ಮಾಜಿ ಅಧ್ಯಕ್ಷ ಕುಮಾರಪ್ಪ, ಕುಶಾಲನಗರ ನಗರ ಪ್ರಾಧಿಕಾರ ಅದ್ಯಕ್ಷ ಚರಣ್. ಸಮಿತಿಯ ಸದಸ್ಯರುಗಳು ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಸೇರಿದಂತೆ ಮೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಅಲ್ಲದೆ, ನೀರಾವರಿ ಇಲಾಖೆಯ ಅಭಿಯಂತರ ಚೆನ್ನಕೇಶವ, ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್, ಇಂಜಿನಿಯರ್ ನಾಗರಾಜ್, ಕಿರಣ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಬೇಸಾಯಕ್ಕೆ 1900 ಕ್ಯೂಸೆಕ್ ನೀರು ನಾಲೆಗೆ

ಕಾವೇರಿ ಅಚ್ಚುಕಟ್ಟು ಪ್ರದೇಶದ ಜಲಾನಯನ ಪ್ರಾಧಿಕಾರ ಸಮಿತಿಯ ಸಭೆಯ ತೀರ್ಮಾನದಂತೆ ರೈತರಿಗೆ ಮುಂಗಾರು ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ಶಾಸಕ ಅಪ್ಪಚ್ಚು ರಂಜನ್ ಅÀವರು ಪೂಜೆ ನೆಡೆದ ನಂತರ ನಾಲೆಯ ಕ್ರೆಸ್ಟ್ ಗೇಟ್‍ನ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು.

ಅಣೆಕಟ್ಟೆಯಲ್ಲಿ 7 ಟಿಎಂಸಿ ನೀರಿನ ಸಂಗ್ರಹವಿದ್ದು ಈಗಾಗಲೇ ಅಣೆಕಟ್ಟೆಯ ಹೆಚ್ಚುವರಿ ನೀರನ್ನು ವಿದ್ಯುತ್ ಘಟಕದ ಮೂಲಕ ಹರಿಸಲಾಗುತ್ತಿತ್ತು. ಇದರ ಜೊತೆಯಲ್ಲಿ ಇಂದಿನಿಂದ ವಿದ್ಯುತ್ ಘಟಕದ ಮೂಲಕ ಬರುವ. 1900 ಕ್ಯೂಸೆಕ್ಸ್ ನೀರನ್ನು ಮುಖ್ಯ. ನಾಲೆಗೆ ಹರಿಸಲಾಯಿತು. ಮುಖ್ಯ ನಾಲೆಯ ಮೂಲಕ ಹರಿಯುವ ನೀರು ಕಣಿವೆ ಹತ್ತಿರವಿರುವ ಬಲ ದಂಡೆಯ ನಾಲೆಗೆ 1500 ಕ್ಯೂಸೆಕ್ಸ್ ನೀರು, ಎಡ ದಂಡೆ ನಾಲೆಗೆ 400 ಕ್ಯೂಸೆಕ್ಸ್ ನೀರನ್ನು ಹರಿಸಲಾಗಿದೆ. -ವರದಿ: ನಾಗರಾಜಶೆಟ್ಟಿ, ಚಂದ್ರಮೋಹನ್