ಶನಿವಾರಸಂತೆ, ಆ. 1: ಶನಿವಾರಸಂತೆ ಲಯನ್ಸ್ ಕ್ಲಬ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಬಿ.ಸಿ. ಧರ್ಮಪ್ಪ ಅಧಿಕಾರ ಸ್ವೀಕರಿಸಿದರು.
ಶನಿವಾರಸಂತೆಯ ಲಯನ್ಸ್ ಕ್ಲಬ್ ಸಂಸ್ಥೆಯ ಕಚೇರಿಯಲ್ಲಿ ನಡೆದ 2020-21ನೇ ಸಾಲಿನ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಮಾಜಿ ರಾಜ್ಯಪಾಲ ಎಂ.ಜೆ.ಐ.ಎಫ್.ವಿ. ರೇಣುಕುಮಾರ್ ಪ್ರಮಾಣ ವಚನ ಬೋಧಿಸಿದರು.
ನೂತನ ಸಾಲಿಗೆ ಕಾರ್ಯದರ್ಶಿಯಾಗಿ ಎಂ.ಆರ್. ನಿರಂಜನ್, ಖಜಾಂಚಿಯಾಗಿ ಬಿ.ಕೆ. ಚಿಣ್ಣಪ್ಪ ಹಾಗೂ ವಿವಿಧ ಹುದ್ದೆಗಳಿಗೆ ಲಯನ್ಸ್ ಸದಸ್ಯರುಗಳು ಆಯ್ಕೆಯಾದರು.
ನಿಯೋಜಿತ ರಾಜ್ಯಪಾಲರಾದ ರೇಣುಕುಮಾರ್ ಮಾತನಾಡಿ, ಲಯನ್ಸ್ ಅಂದರೆ ಸೇವೆ, ಈ ನಿಟ್ಟಿನಲ್ಲಿ ನೀವುಗಳು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಪ್ರಾಜೆಕ್ಟ್ ತಯಾರು ಮಾಡಿ ಕಳುಹಿಸಿದ್ದಲ್ಲಿ ನಮ್ಮಿಂದ ವಂತಿಗೆಯನ್ನು ಕೊಡಲಾಗುತ್ತಿದೆ. ಅಲ್ಲದೆ ಈ ಕ್ಲಬ್ ತಮ್ಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಇದೇ ನಿಟ್ಟಿನಲ್ಲಿ ಮುಂದುವರಿಯಿರಿ ಎಂದು ಆಶಿಸುತ್ತೇವೆ ಎಂದರು.
ನೂತನ ಅಧ್ಯಕ್ಷ ಬಿ.ಸಿ. ಧರ್ಮಪ್ಪ ಮಾತನಾಡಿ, ಕ್ಲಬ್‍ನ ಸೇವಾಭಿವೃದ್ಧಿಗೆ ಕೆಲವೊಂದು ಸಾರ್ವಜನಿಕರಿಗೆ ಉಪಯೋಗ ವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸದಸ್ಯರ ಸಹಕಾರ ಕೋರಿದರು. ಇದೇ ಸಂದರ್ಭದಲ್ಲಿ ಪ್ರಾಂತಿಯ ಅಧ್ಯಕ್ಷ ರವಿಕುಮಾರ್ ಹಿರಿಯ ಸದಸ್ಯ ಮೋಹನ್‍ಕುಮಾರ್ ಹಾಜರಿದ್ದು, ಸಲಹೆ ನೀಡಿದರು.
ಲಯನ್ಸ್ ಸದಸ್ಯ ಎಂ.ಎನ್. ಶಂಕರ್ ಧ್ವಜವಂದನ್ ಮಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಉಪಾಧ್ಯಕ್ಷರುಗಳಾದ ನಾರಾಯಣಸ್ವಾಮಿ, ಎನ್.ಕೆ. ಅಪ್ಪಸ್ವಾಮಿ, ಬಿ.ಕೆ. ಚಿಣ್ಣಪ್ಪ, ಸದಸ್ಯರು ಗಳಾದ ಎಸ್.ಎಸ್. ಚಂದ್ರಶೇಖರ್, ಸಿ.ಪಿ. ಹರೀಶ್, ಕೆ.ಎಂ. ಜಗನ್‍ಪಾಲ್ ಕಾರ್ಯಪ್ಪ, ಕೇಶವಮೂರ್ತಿ, ಎಂ.ಆರ್. ಮಲ್ಲೇಶ್, ಬಿ.ಎಸ್. ಪುಟ್ಟರಾಜ್, ಜಿ.ಬಿ. ಪರಮೇಶ್. ಎಂ.ಎನ್. ಶಂಕರ್, ಎಸ್.ಜಿ. ನರೇಶ್‍ಚಂದ್ರ ಇದ್ದರು. ನಾರಾಯಣಸ್ವಾಮಿ ಸ್ವಾಗತಿಸಿ, ಪರಿಚಯಿಸಿದರು. ನಿರಂಜನ್ ವರದಿ ಮಂಡಿಸಿ, ಬಿ.ಕೆ. ಚಿಣ್ಣಪ್ಪ ವಂದಿಸಿದರು.