ವೀರಾಜಪೇಟೆ, ಜು. 31: ವೀರಾಜಪೇಟೆಯ ವಿಜಯನಗರದಲ್ಲಿ ವಾಸವಿರುವ 32 ವರ್ಷದ ಡಿ.ಗ್ರೂಪ್ ನೌಕರನಿಗೆ ಕೊರೊನಾ ವೈರಸ್ ತಪಾಸಣೆಯಲಿ ಪಾಸಿಟಿವ್ ಬಂದ ಕಾರಣ ವಿಜಯನಗರದ 13 ಮನೆಗಳು 44 ಮಂದಿ ಜನಸಂಖ್ಯೆ ಇರುವ ಪ್ರದೇಶದ ಒಂದು ಭಾಗವನ್ನು ಸೀಲ್ಡೌನ್ ಮಾಡಿ ಸಾರ್ವಜನಿಕ ಸಂಪರ್ಕದಿಂದ ತಡೆ ಮಾಡಲಾಗಿದೆ.
ಆಸ್ಪತ್ರೆಯೊಂದರಲ್ಲಿ ಡಿ.ಗ್ರೂಪ್ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದು, ಶಂಕೆಯ ಮೇರೆ ನಿನ್ನೆ ಈತನ ದ್ರಾವಣವನ್ನು ತಪಾಸಣೆಗೆ ಕಳಿಸಿದ್ದಾಗ ಇಂದು ಪಾಸಿಟಿವ್ ವರದಿ ಬಂದಿದೆ. ತಾಲೂಕು ತಹಶೀಲ್ದಾರ್ ಹಾಗೂ ತಾಲೂಕಿನ ಆರೋಗ್ಯಾಧಿಕಾರಿ ತಂಡ ಇಂದು ಅಪರಾಹ್ನ ಸೀಲ್ಡೌನ್ ಮಾಡಿ ನಿರ್ಬಂಧ ವಿಧಿಸಿದೆ. ವೀರಾಜಪೇಟೆ ಪಟ್ಟಣದಲ್ಲಿ ಇದು 8ನೇ ಸೀಲ್ಡೌನ್ ಆಗಿದೆ,