ಶನಿವಾರಸಂತೆ, ಆ. 1: ಸಾಮಥ್ರ್ಯಕ್ಕಿಂತ ಹೆಚ್ಚು ಬಾರದ ವಸ್ತುಗಳನ್ನು ತುಂಬಿಸಿಕೊಂಡು ಸಾರ್ವಜನಿಕ ರಸ್ತೆಯಲ್ಲಿ ಚಾಲಿಸುವ ವಾಹನಗಳ ಸಂಚಾರವನ್ನು ನಿಷೇಧ ಮಾಡಿರುವ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ ಲಾರಿ (ಕೆ.ಎ.13 ಸಿ.6894) ಚಾಲಕನಿಗೆ ಮಡಿಕೇರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಾ. 8 ರಂದು ರಾತ್ರಿ ವೃತ್ತ ನಿರೀಕ್ಷಕ ನಂಜುಂಡೇಗೌಡ ಹಾಗೂ ಸಿಬ್ಬಂದಿಗಳು ಇಲಾಖಾ ವಾಹನದಲ್ಲಿ ಗಸ್ತಿನಲ್ಲಿದ್ದ ವೇಳೆ ಗುಡುಗಳಲೆ ಬಳಿ ವಾಹನಗಳ ತಪಾಸಣೆಯಲ್ಲಿರುವಾಗ ಲಾರಿಯಲ್ಲಿ ಇದ್ದಿಲುಗಳನ್ನು ತುಂಬಿಸಿಕೊಂಡು ಹೊರ ಜಿಲ್ಲೆಗೆ ಸಾಗಾಟ ಮಾಡುತ್ತಿದ್ದುದು ಕಂಡು ಬಂದು ಲಾರಿಯನ್ನು ತಡೆದು ಪರಿಶೀಲಿಸಿ, ಲಾರಿಯನ್ನು ವಶಪಡಿಸಿಕೊಂಡು, ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿಗೆ ವರದಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ ಲಾರಿ ಮಾಲೀಕ ಹಾಸನಾದ ಭವಾನಿ ಶಂಕರ್ ಎಂಬವರಿಗೆ ರೂ. 2 ಸಾವಿರ ದಂಡ ಹಾಗೂ 9 ತಿಂಗಳು ಮೋಟಾರ್ ವೈಕಲ್ ಟ್ಯಾಕ್ಸ್ ರೂ. 32 ಸಾವಿರ ಕಟ್ಟದೆ ಇದ್ದು, ಲಾರಿ ಮಾಲೀಕ ಇದೀಗ ಒಟ್ಟು ರೂ. 34 ಸಾವಿರ ಕಟ್ಟಿ ಶನಿವಾರಸಂತೆ ಠಾಣಾ ಸರಹದ್ದಿನಲ್ಲಿ ನಿಲ್ಲಿಸಲಾದ ಲಾರಿಯನ್ನು ಬಿಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಇ. ದೇವರಾಜ್, ಸಿಬ್ಬಂದಿಗಳಾದ ವಿವೇಕ್, ಬೋಪಣ್ಣ, ರವಿಚಂದ್ರ, ಲೋಕೇಶ್, ಶಫೀರ್, ವಿನಯ ಇತರರು ಪಾಲ್ಗೊಂಡಿದ್ದರು.