ಕೊಡ್ಲಿಪೇಟೆ, ಆ. 1: ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ಕರ್ನಾಟಕ ರಾಜ್ಯ ಸಂಘದ ನಿರ್ದೆಶಕರಾಗಿ ಕೊಡಗು ಜಿಲ್ಲೆಯಿಂದ ಕೊಡ್ಲಿಪೇಟೆಯ ವೇದಮೂರ್ತಿ ಸೋಮಶೇಖರ ಶಾಸ್ತ್ರಿ ಅವರನ್ನು ಆಯ್ಕೆ ಮಾಡಲಾಗಿದೆ.
ಇವರು ಕೊಡಗು ಜಿಲ್ಲಾ ವೀರಶೈವ ಜಂಗಮ ಅರ್ಚಕರು ಹಾಗೂ ಪುರೋಹಿತರ ಸಂಘದ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.