ಮಡಿಕೇರಿ, ಜು. 31: ಜಿಲ್ಲೆಯಲ್ಲಿ ಹೊಸದಾಗಿ 50 ಕೊರೊನಾ ಪ್ರಕರಣ ಗಳು ವರದಿಯಾಗಿವೆ. ಇದುವರೆಗೆ 449 ಕೊರೊನಾ ಪ್ರಕರಣಗಳು ವರದಿ ಆಗಿದ್ದು, 301 ಮಂದಿ ಗುಣಮುಖ ರಾಗಿದ್ದಾರೆ. 9 ಮಂದಿ ಸಾವನ್ನಪ್ಪಿದ್ದು, 139 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ ಒಟ್ಟು 111 ನಿಯಂತ್ರಿತ ಪ್ರದೇಶಗಳಿವೆ. ಹೊಸ ಪ್ರಕರಣಗಳ ವಿವರ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಕೊರೊನಾ ಮಡಿಕೇರಿಯ ಗೌಳಿಬೀದಿಯಲ್ಲಿನ 56 ವರ್ಷದ ಪೆÇಲೀಸ್ ಇಲಾಖೆಯ ಪುರುಷ, ಮಡಿಕೇರಿ ಪೆÇಲೀಸ್ ವಸತಿಗೃಹದÀ 56 ವರ್ಷದ ಪುರುಷ, ಮಡಿಕೇರಿಯ ಪೆÇಲೀಸ್ ವಸತಿಗೃಹದ ಪೊಲೀಸ್ ಇಲಾಖೆಯ ಸಿಬ್ಬಂದಿ ಗಳಾದ 48 ವರ್ಷದ ಪುರುಷ, 46 ವರ್ಷದ ಪುರುಷ, ಸೋಮವಾರ ಪೇಟೆಯ ಶಾಂತಳ್ಳಿ ಸಮೀಪದ ಗುಡ್ಡಳ್ಳಿಯ 48 ವರ್ಷದ ಪುರುಷ ಪೆÇಲೀಸ್ ಸಿಬ್ಬಂದಿ, ಮಡಿಕೇರಿಯ ಸುಬ್ರಮಣ್ಯ ನಗರದ ಪೆÇಲೀಸ್ ವಸತಿ ಗೃಹದ 41 ವರ್ಷದ ಪೆÇಲೀಸ್ ಇಲಾಖೆಯ ಪುರುಷ ಸಿಬ್ಬಂದಿಗೆ ಸೋಂಕು ತಗುಲಿದೆ. ಆರೋಗ್ಯ ಕಾರ್ಯಕರ್ತರಿಗೆ ‘ಪಾಸಿಟಿವ್’

ಗೌಡಳ್ಳಿಯ ಆರೋಗ್ಯ ವಸತಿ ಗೃಹದ 28 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆ, ವೀರಾಜಪೇಟೆಯ ವಿಜಯನಗರದ 32 ವರ್ಷದ ಆರೋಗ್ಯ ಕಾರ್ಯಕರ್ತೆ, ಗೋಣಿಕೊಪ್ಪದ ನೇತಾಜಿ ಲೇಔಟ್ ನ 47 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆಗೂ ಸೋಂಕು ತಗುಲಿದೆ. ಅಂತರರಾಷ್ಟ್ರೀಯ ಪ್ರಯಾಣದ ಇತಿಹಾಸ ಹೊಂದಿರುವ ಬೋಯಿಕೇರಿಯ 32 ಮತ್ತು 29 ವರ್ಷದ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ. ನಾಪೆÇೀಕ್ಲುವಿನ 25 ವರ್ಷದ ಗರ್ಭಿಣಿ ಮಹಿಳೆ, ವೀರಾಜಪೇಟೆಯ ಮೊಗರಗಲ್ಲಿಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 53 ವರ್ಷ ಪುರುಷ, 49 ವರ್ಷದ ಮಹಿಳೆ, 10 ವರ್ಷದ ಬಾಲಕ, 27 ವರ್ಷದ ಪುರುಷ,

(ಮೊದಲ ಪುಟದಿಂದ) 55 ವರ್ಷದ ಪುರುಷ, 58 ವರ್ಷದ ಪುರುಷ, 21 ವರ್ಷದ ಪುರುಷ ಮತ್ತು 48 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ವೀರಾಜಪೇಟೆಯ ವಡ್ಡರಮಾಡುವಿ ನಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 40 ವರ್ಷದ ಪುರುಷ ಮತ್ತು 48 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಹಾಸನದÀ ಅರಕಲಗೋಡುವಿನ ಹುಲಿಕಲ್À ಮೂಲದ ಕೆಎಸ್‍ಆರ್‍ಟಿಸಿ ಡಿಪೋದ 29 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಹಾಸನದ ಹೊಳೆನರಸೀಪುರದ ಕೆಎಸ್‍ಆರ್‍ಟಿಸಿ ಡಿಪೋವಿನ 38 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ವೀರಾಜಪೇಟೆಯ ಬಿರುನಾಣಿ ಗ್ರಾಮದ 54 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಸಿದ್ದಾಪುರ ಎಂ.ಜಿ. ರಸ್ತೆಯ 52 ವರ್ಷದ ಪುರುಷ ಮತ್ತು 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ವೀರಾಜಪೇಟೆಯ ವಡ್ಡರಮಾಡುವಿನ 36, 30 ಮತ್ತು 75 ವರ್ಷದ ಮಹಿಳೆ, ಹುಲುಸೆಯ 75 ವರ್ಷದ ಮಹಿಳೆಗೂ ಸೋಂಕು ತಗುಲಿದೆ. ವೀರಾಜಪೇಟೆಯ ಕರಡದ 26 ವರ್ಷದ ಪುರುಷ, ಮಡಿಕೇರಿ ಐಟಿಐ ಜಂಕ್ಷನ್ ಬಳಿಯ 32 ವರ್ಷದ ಮಹಿಳೆ, ವೀರಾಜಪೇಟೆಯ ಕಾಕೋಟುಪರಂಬುವಿನ 10 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿ ಮಹದೇವಪೇಟೆಯ 59 ಮತ್ತು 28 ವರ್ಷದ ಪುರುಷ, ವೀರಾಜಪೇಟೆಯ ವಡ್ಡರಮಾಡುವಿನ 36 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಗೋಣಿಕೊಪ್ಪದ 28 ಮತ್ತು 29 ವರ್ಷದ ಪುರುಷರು, ಗೋಣಿಕೊಪ್ಪದ ಕೊಯಿಕೇರಿ ಈರಣ್ಣ ಕಾಲೋನಿಯ 46 ವರ್ಷದ ಪುರುಷ, ವೀರಾಜಪೇಟೆ ಪಾಲಿಬೆಟ್ಟದ 83 ವರ್ಷದ ಮಹಿಳೆ, ಮಡಿಕೇರಿ ಕಾನ್ವೆಂಟ್ ಜಂಕ್ಷನ್ ಬಳಿಯ 8 ವರ್ಷದ ಬಾಲಕಿ ಮತ್ತು 4 ವರ್ಷದ ಬಾಲಕ, ಮಡಿಕೇರಿ ಗಣಪತಿ ಬೀದಿಯಲ್ಲಿನ 26 ವರ್ಷದ ಪುರುಷ, ಮಡಿಕೇರಿ ಮಹದೇವಪೇಟೆಯ 73 ವರ್ಷದ ಪುರುಷ, ಸುಂಟಿಕೊಪ್ಪದ ಗುಂಡುಕುಟ್ಟಿಯ 35 ವರ್ಷದ ಪುರುಷನಿಗೂ ಸೋಂಕು ತಗುಲಿದೆ. ಮಡಿಕೇರಿ ಕಾರಗುಂದದ ಕಡಿಯತ್ತೂರಿನ 29 ವರ್ಷದ ಮಹಿಳೆ, ಸೋಮವಾರಪೇಟೆ ಹೊಸೂರಿನ 79 ವರ್ಷದ ಮಹಿಳೆ, ಕುಶಾಲನಗರದ 42 ವರ್ಷದ ಪುರುಷ, ಮಡಿಕೇರಿಯ ಮುತ್ತಪ್ಪ ದೇವಾಲಯದ ಬಳಿಯ 32 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.