ನಾಪೆÇೀಕ್ಲು, ಜು. 30: ಹೋಂಸ್ಟೇ ಗಳಲ್ಲಿ ತಂಗುವ ಪ್ರವಾಸಿಗರಿಗೆ ನಾಲ್ಕುನಾಡು ವ್ಯಾಪ್ತಿಯ ಯಾವದೇ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗುವದಿಲ್ಲ ಎಂದು ಮಡಿಕೇರಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಹೇಳಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿದ ಅವರು ಸರಕಾರ, ಜಿಲ್ಲಾಡಳಿತ ಹೋಂಸ್ಟೇ ತೆರೆಯಲು ಅವಕಾಶ ನೀಡಿದೆ. ಸರಕಾರದ ನಿರ್ಧಾರಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತಿಲ್ಲ. ಹೋಂಸ್ಟೇ ಗಳಲ್ಲಿ ಅತಿಥಿಗಳು ತಂಗುವದಕ್ಕೂ ನಮ್ಮ ಅಭ್ಯಂತರವಿಲ್ಲ. ಜಿಲ್ಲೆಯಲ್ಲಿ ಇತ್ತೀಚೆಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾಲ್ಕುನಾಡು ವ್ಯಾಪ್ತಿಯ ತಡಿಯಂಡಮೋಳ್ ಬೆಟ್ಟ, ಚೇಲಾವರ ಜಲಪಾತ ಸೇರಿದಂತೆ ಧಾರ್ಮಿಕ ಕೇಂದ್ರ, ಮತ್ತಿತರ ಸ್ಥಳಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ನೀಡುವದಿಲ್ಲ. ಈ ಬಗ್ಗೆ ಗ್ರಾಮಸ್ಥರು ಹೋಂಸ್ಟೇ ಮಾಲೀಕ ರೊಂದಿಗೆ ಚರ್ಚಿಸಿ ಈ ಕ್ರಮಕೈಗೊಳ್ಳ ಲಾಗಿದೆ. ಇದಕ್ಕೆ ಹೋಂಸ್ಟೇ ಮಾಲೀಕರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.