ಸೋಮವಾರಪೇಟೆ, ಜು. 30: ಕಾಫಿ ತೋಟದಲ್ಲಿ ಬೆಳೆಯಲಾಗಿದ್ದ ಕರಿಮೆಣಸು ಬಳ್ಳಿಗಳನ್ನು ಕತ್ತಿಯಿಂದ ಕಡಿದು ವಿಕೃತಿ ಮೆರೆದಿರುವ ಘಟನೆ ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.

ತೋಳೂರುಶೆಟ್ಟಳ್ಳಿ ನಡ್ಲಕೊಪ್ಪದ ವಿ.ವಿ. ಸುಬ್ಬಯ್ಯ ಅವರಿಗೆ ಸೇರಿದ ಕಾಫಿ ತೋಟದಲ್ಲಿದ್ದ ಫಸಲು ನೀಡುತ್ತಿದ್ದ ಸುಮಾರು 20 ಬಳ್ಳಿಗಳನ್ನು ದುರುಳರು ಕಡಿದು ಹಾಕಿದ್ದು, ಮಾಲೀಕರಿಗೆ ನಷ್ಟ ಸಂಭವಿಸಿದೆ.

ಮಳೆ ಹಿನ್ನೆಲೆ ಕರಿಮೆಣಸು ಬಳ್ಳಿಗಳಲ್ಲಿ ಚಿಗುರು, ಮೆಣಸಿನ ಗರಿಗಳು ಮೂಡುತ್ತಿರುವ ಸಂದರ್ಭದಲ್ಲಿಯೇ ಬಳ್ಳಿಗಳನ್ನು ಕತ್ತಿಯಿಂದ ಕಡಿದು ವಿಕೃತಿ ತೋರಲಾಗಿದೆ. ಈ ಬಗ್ಗೆ ಸುಬ್ಬಯ್ಯ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕರಿಮೆಣಸು ಬಳ್ಳಿಗಳನ್ನು ಕಡಿದು ಹಾಕಿರುವ ದುರುಳರನ್ನು ಪತ್ತೆಹಚ್ಚಿ, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.