ವೀರಾಜಪೇಟೆ, ಜು. 30: ಮೈಸೂರಿನ ಜೆ.ಎಸ್.ಎಸ್. ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಮತ್ತು ರಿಸರ್ಚ್ ಸಂಸ್ಥೆಯು ಕೋಡಿಮಣಿಯಂಡ ಪೂಜಾ ಬೋಪಣ್ಣ ಅವರು ಸಂಶೋಧನೆ ಮಾಡಿ ಮಂಡಿಸಿದ “ಮೈಕೋಪ್ಲಾಸ್ಮ ನಿಮೋನಿಯ” ಎಂಬ ಇಂಗ್ಲೀಷ್ ಪ್ರಬಂಧಕ್ಕೆ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ. ಪೂಜಾ ಬೋಪಣ್ಣ ಕರಡ ಗ್ರಾಮದ ಪಟ್ರಪಂಡ ಸುರೇಶ್ ಬೆಳ್ಳಿಯಪ್ಪ-ಗೀತಾ ದಂಪತಿಯ ಪುತ್ರಿ. ಪ್ರೋ. ತೇಜಶ್ರೀ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಬರೆದಿದ್ದರು.